ಬದಿಯಡ್ಕ: ಅಧ್ಯಾಪನ ಎಂಬುದು ಶ್ರೇಷ್ಠ ವೃತ್ತಿ. ನಿವೃತ್ತಿ ನಂತರವೂ ಶಿಕ್ಷಕರು ಸಮಾಜದಲ್ಲಿ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಹೇಳಿದರು.
ಸರ್ಕಾರಿ ಪ್ರೌಢಶಾಲೆ ಪೆರಡಾಲದಲ್ಲಿ ನಿವೃತ್ತಿ ಹೊಂದಿದ ಶ್ರೀದೇವಿ, ಚಂದ್ರಹಾಸನ್ ನಂಬಿಯಾರ್, ಶಾಂತಾಮಣಿ ಅವರಿಗೆ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಮ್ಮದ್ ಕರೋಡಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರನ್ನು ಶಾಲು ಹೊದಿಸಿ ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮ, ಮಾತೃ ರಕ್ಷಕ ಸಂಘದ ಅಧ್ಯಕ್ಷೆ ಮೇರಿ ಸಿಜೋ ಶುಭಾಶಂಸನೆಗೈದರು. ಗ್ರಾಮ ಪಂಚಾಯತಿ ಸದಸ್ಯ ಬಾಲಕೃಷ್ಣ ಶೆಟ್ಟಿ, ಎಸ್.ಎಂ.ಸಿ. ಅಧ್ಯಕ್ಷ ಶರೀಫ್ ಬಾರಡ್ಕ ಮಾತನಾಡಿದರು. ಮುಖಂಡರುಗಳಾದ ಮಾಹಿನ್ ಕೇಳೋಟ್, ನಾರಾಯಣನ್, ನಾರಾಯಣ ಭಟ್, ರಂಜಿತ್ ಅವರು ನಿವೃತ್ತರಿಗೆ ಶುಭಾಶಯ ಕೋರಿದರು. ಶಿಕ್ಷಕಿ ದಿವ್ಯ ಗಂಗಾ ನಿವೃತ್ತರನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಸುದೀರ್ಘವಾಗಿ ಸೇವೆ ಸಲ್ಲಿಸಿದ ಎನ್.ಬಿ.ಬಡುವನ್ ಕುಂಞÂ್ಞ ಅವರನ್ನು ಸನ್ಮಾನಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ರಾಜಗೋಪಾಲ್ ಸ್ವಾಗತಿಸಿ, ಶಿಕ್ಷಕ ರಿಶಾದ್ ಪಿ.ಎಂ.ಎ. ವಂದಿಸಿದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಮೊೈದು ಪಾಲ್ತೊಟ್ಟಿ ಕಾರ್ಯಕ್ರಮ ನಿರೂಪಿಸಿದರು.