ಪೆರ್ಲ: ಸಂಪ್ರದಾಯಿಕ ಚೆಂಡೆ ಮೇಳಗಳನ್ನೊಳಗೊಂಡ ವೈಭವದೊಂದಿಗೆ ಪ್ರಾಕೃತಿಕ ವಸ್ತುಗಳಿಂದ ಅಲಂಕರಿಸಲ್ಪಟ್ಟ ವಾತವರಣದಲ್ಲಿ ಪೆರ್ಲ ಸತ್ಯನಾರಾಯಣ.ಹೈಸ್ಕೂಲಿಗೆ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.
ಎಣ್ಮಕಜೆ ಪಂ.ಅಧ್ಯಕ್ಷ ಸೋಮಶೇಖರ ಜೆ.ಎಸ್.ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಬಿ.ರಾಜೇಂದ್ರ, ರಕ್ಷಕ ಶಿಕ್ಷಕ ಸಮಿತಿ ಅಧ್ಯಕ್ಷ ಕೆ.ಪುಟ್ಟಪ್ಪ ,ಶಾಲಾ ಆಡಳಿತ ಸಮಿತಿ ಉಪಾಧ್ಯಕ್ಷ ಸದಾಶಿವ ಭಟ್ ಹರಿನಿಲಯ ಮತ್ತು ಶಿಕ್ಷಕ ವೃಂದದವರು ಮಕ್ಕಳನ್ನು ಸ್ವಾಗತಿಸಿದರು. ಶಾಲೆಯ ಕಲಾ ಪ್ರತಿಭೆಗಳಾದ ಶ್ರೀಶ ನಾರಾಯಣ, ಸಮೃದ್ಧ ಪುಣಿಂಚಿತ್ತಾಯ ಚೆಂಡೆ -ತಾಳದಲ್ಲಿ ಸಹಕರಿಸಿದರು.