ತಿರುವನಂತಪುರ: ಕೊರೊನಾ, ಮಳೆ ಮತ್ತು ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ಮೇಲೆ ರಾಜ್ಯ ಸರ್ಕಾರ ಮತ್ತೊಂದು ಬರೆ ಮೂಡಿಸಿದೆ. ಬಸ್ ಪ್ರಯಾಣ ದರ ಏರಿಕೆ ಮಾಡಬೇಕೆಂಬ ಬಸ್ ಮಾಲೀಕರ ಬೇಡಿಕೆಗೆ ಸರ್ಕಾರ ಸಮ್ಮತಿಸಿದೆ. ಸಾರಿಗೆ ಸಚಿವರ ನೇತೃತ್ವದಲ್ಲಿ ಬಸ್ ಮಾಲೀಕರೊಂದಿಗೆ ಇಂದು ಸಂಜೆ ನಡೆದ ಸಭೆಯಲ್ಲಿ ಪ್ರಯಾಣ ದರ ಹೆಚ್ಚಳಕ್ಕೆ ಒಪ್ಪಿಗೆ ನೀಡಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ತೆರಿಗೆಯನ್ನು ಒಂದು ಪೈಸೆಯೂ ಕಡಿಮೆ ಮಾಡದೆ ಬಸ್ ಪ್ರಯಾಣ ದರವನ್ನು ಹೆಚ್ಚಿಸಲು ಸರ್ಕಾರ ಮುಂದಾಗಿದೆ.
ಆದರೆ ಎಷ್ಟು ಹೆಚ್ಚಿಸಬೇಕು ಎಂಬ ಬಗ್ಗೆ ಒಪ್ಪಂದವಾಗಿಲ್ಲ. ಇದಕ್ಕಾಗಿ 3 ಸದಸ್ಯರ ಉಪ ಸಮಿತಿಯನ್ನು ನೇಮಿಸಲಾಗಿದೆ. ನ್ಯಾಯಮೂರ್ತಿ ರಾಮಚಂದ್ರನ್ ಆಯೋಗದೊಂದಿಗೆ ಸಮಾಲೋಚನೆ ನಡೆಸಿದ ನಂತರ, ಸಂಪುಟವು ಎಷ್ಟು ರೂ.ಹೆಚ್ಚಳಗೊಳಿಸಬೇಕೆಂಬುದನ್ನು ನಿರ್ಧರಿಸುತ್ತದೆ.
ಶೀಘ್ರದಲ್ಲೇ ಆಟೋ ಮತ್ತು ಟ್ಯಾಕ್ಸಿ ದರಗಳು ಕೂಡ ಹೆಚ್ಚಾಗುವ ನಿರೀಕ್ಷೆಯಿದೆ. ಇದಕ್ಕಾಗಿ ಎಡಪಕ್ಷಗಳು ಹಾಗೂ ಸರ್ಕಾರ ಒತ್ತಡ ಹೇರುತ್ತಿದೆ. ವಿದ್ಯುತ್ ದರ ಏರಿಕೆ ನಿರ್ಧಾರ ಬಹುತೇಕ ಖಚಿತವಾಗಿದೆ. ಇದರ ಬೆನ್ನಲ್ಲೇ ಬಸ್ ದರಗಳು, ಆಟೋ ಮತ್ತು ಟ್ಯಾಕ್ಸಿ ದರಗಳು ಏರುತ್ತಿವೆ. ಈ ಹೆಚ್ಚಳವು ಹಣದುಬ್ಬರ ಮತ್ತು ಕೊರೋನಾ ಸಾಂಕ್ರಾಮಿಕದಿಂದ ಪೀಡಿತ ಜನರಿಗೆ ದೊಡ್ಡ ಹಿನ್ನಡೆಯಾಗಲಿದೆ. ಇದು ಸಾಮಾನ್ಯ ಜನರ ಕುಟುಂಬದ ಬಜೆಟ್ ಮೇಲೂ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ.
ಕಳೆದ ವಾರ ಕೊಟ್ಟಾಯಂನಲ್ಲಿ ನಡೆದ ಸಭೆಯಲ್ಲಿ ಸರ್ಕಾರ ಶುಲ್ಕ ಹೆಚ್ಚಳದ ಭರವಸೆ ನೀಡಿತ್ತು. ಕನಿಷ್ಠ ಪ್ರಯಾಣ ದರವನ್ನು 12 ರೂ.ಗೆ ಹೆಚ್ಚಿಸುವುದು ಮತ್ತು ವಿದ್ಯಾರ್ಥಿಗಳ ರಿಯಾಯಿತಿ ಕನಿಷ್ಠ ದರ 6 ರೂ.ಗೆ ಹೆಚ್ಚಿಸಬೇಕು ಎಂಬುದು ಬಸ್ ಮಾಲೀಕರ ಪ್ರಮುಖ ಬೇಡಿಯಾಗಿತ್ತು.