ರಾಜಸ್ಥಾನದಲ್ಲಿ ಪೆಟ್ರೋಲ್ ದರ 111.06 ರೂ., ಡೀಸೆಲ್ ಬೆಲೆ 95.67 ರೂ. ದರವಿದೆ. ಕೇಂದ್ರವು ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದರೂ, ರಾಜಸ್ಥಾನದ ಕಾಂಗ್ರೆಸ್ ಸರ್ಕಾರವು ಮೌಲ್ಯವರ್ಧಿತ ತೆರಿಗೆಯನ್ನು ಕಡಿಮೆ ಮಾಡಲು ಹಿಂದೇಟು ಹಾಕುತ್ತಿದೆ. ಇದರೊಂದಿಗೆ ಪೆಟ್ರೋಲ್ ಬೆಲೆ 111 ರೂ., ಡೀಸೆಲ್ ಬೆಲೆ 95 ರೂ. ಇದೆ. ತೆರಿಗೆ ಇಳಿಸದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿದೆ.
ಉದ್ಧವ್ ಠಾಕ್ರೆ ನೇತೃತ್ವದ ಮಹಾವಿಕಾಸ್ ಅಖಾಡಿ ಆಡಳಿತದಲ್ಲಿರುವ ಮಹಾರಾಷ್ಟ್ರವು ಇಂಧನ ಬೆಲೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ ಪೆಟ್ರೋಲ್ ದರ 109.94 ರೂ., ಡೀಸೆಲ್ ಬೆಲೆ 94.14 ರೂ. ಆಂಧ್ರಪ್ರದೇಶವು ಪ್ರತಿ ಲೀಟರ್ ಪೆಟ್ರೋಲ್‌ಗೆ ರೂ 109.46 ಮತ್ತು ಡೀಸೆಲ್‌ಗೆ ರೂ 96.77 ರೊಂದಿಗೆ ಮೂರನೇ ಸ್ಥಾನದಲ್ಲಿದೆ, ತೆಲಂಗಾಣವು ಪ್ರತಿ ಲೀಟರ್ ಪೆಟ್ರೋಲ್‌ಗೆ ರೂ 108.20 ಮತ್ತು ಡೀಸೆಲ್‌ಗೆ ರೂ 94.63 ನೊಂದಿಗೆ ನಂತರದ ಸ್ಥಾನದಲ್ಲಿದೆ. ಕೇರಳದಲ್ಲಿ ನಿನ್ನೆ ಪೆಟ್ರೋಲ್ ದರ 106.36 ರೂ., ಡೀಸೆಲ್ ದರ 93.47 ರೂ.ಆಗಿತ್ತು.