HEALTH TIPS

ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯ ವೇಳೆ ಮೃತಪಟ್ಟ ರೈತರ ಕುಟುಂಬಗಳಿಗೆ ಉದ್ಯೋಗ: ಪಂಜಾಬ್ ಸರಕಾರ ಘೋಷಣೆ

                   ನವದೆಹಲಿ :ಚರಣ್‌ಜಿತ್‌ ಸಿಂಗ್‌ ಚನ್ನಿ ನೇತೃತ್ವದ ಪಂಜಾಬ್‌ ಸರಕಾರ ಸೋಮವಾರದಿಂದ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯ ವೇಳೆ ಪ್ರಾಣ ಕಳೆದುಕೊಂಡ ರೈತರ ಕುಟುಂಬಗಳಿಗೆ ಉದ್ಯೋಗ ನೀಡಲು ಆರಂಭಿಸಿದೆ.

                ಮುಂಬರುವ ರಾಜ್ಯ ಚುನಾವಣೆಯ ಸ್ಪರ್ಧೆಯು ಕಾವೇರಿರುವ ಸಮಯದಲ್ಲಿ ಸ್ವಾತಂತ್ರ್ಯ ದಿನದಂದು ಹಿಂಸಾಚಾರದ ಆರೋಪದಲ್ಲಿ ದಿಲ್ಲಿಯಲ್ಲಿ ಬಂಧಿತರಾದವರಿಗೆ ಆರ್ಥಿಕ ನೆರವು ನೀಡುವುದಾಗಿ ಪಂಜಾಬ್ ಸರಕಾರ ಘೋಷಿಸಿದ ಕೆಲವು ದಿನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ರೈತರನ್ನು ಪ್ರತಿನಿಧಿಸುವ ಸಂಯುಕ್ತ ಕಿಸಾನ್ ಮೋರ್ಚಾ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಪರಿಹಾರಕ್ಕಾಗಿ ಒತ್ತಾಯಿಸುತ್ತಿರುವಾಗ ಈ ಹೆಜ್ಜೆ ಇಡಲಾಗಿದೆ.

ಪ್ರತಿಭಟನೆಯ ವೇಳೆ ಮೃತಪಟ್ಟವರ ಕುಟುಂಬಗಳಿಗೆ ಉದ್ಯೋಗ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಕಚೇರಿ ಟ್ವೀಟ್‌ನಲ್ಲಿ ಪ್ರಕಟಿಸಿದೆ.

                 ಟ್ವೀಟ್ ಪ್ರಕಾರ "ಮೂರು ಕರಾಳ ಕೃಷಿ ಕಾನೂನುಗಳ ವಿರುದ್ಧ ರೈತರ ಆಂದೋಲನವು ದೇಶದಲ್ಲಿ ಪ್ರಜಾಪ್ರಭುತ್ವ ಹಾಗೂ ಮಾನವ ಹಕ್ಕುಗಳನ್ನು ರಕ್ಷಿಸುವ ಮಹತ್ವದ ಚಳುವಳಿಯಾಗಿ ಎಂದಿಗೂ ನೆನಪಿನಲ್ಲಿ ಉಳಿಯುತ್ತದೆ" ಎಂದು ಚನ್ನಿ ಹೇಳಿದ್ದಾರೆ.

            ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಕೂಡ ಉಪಸ್ಥಿತರಿದ್ದರು.

             ಟ್ವೀಟ್ ಜೊತೆಗಿನ ಹೇಳಿಕೆಯ ಪ್ರಕಾರ ಹೋರಾಟದ ಸಮಯದಲ್ಲಿ ಪಂಜಾಬ್ 700 ಕ್ಕೂ ಹೆಚ್ಚು ಪುತ್ರರು ಹಾಗೂ ಪುತ್ರಿಯರನ್ನು ಕಳೆದುಕೊಂಡಿರುವುದರಿಂದ ಸಂತೋಷಪಡಲು ಯಾವುದೇ ಕಾರಣವಿಲ್ಲ ಎಂದು ಚನ್ನಿ ಹೇಳಿದ್ದಾರೆ.

                ಮತ್ತೊಂದು ಟ್ವೀಟ್‌ನಲ್ಲಿ ಪಂಜಾಬ್ ಕಾಂಗ್ರೆಸ್ ತನ್ನ ಶಾಸಕರೊಬ್ಬರು ಮತ್ತೊಂದು ಸಂತ್ರಸ್ತ ಕುಟುಂಬಕ್ಕೆ ನೇಮಕಾತಿ ಪತ್ರವನ್ನು ಹಸ್ತಾಂತರಿಸುವುದನ್ನು ತೋರಿಸಿದೆ.

"ಶಾಸಕ ರಮೀಂದರ್ ಅವ್ಲಾ ಅವರು ದಿಲ್ಲಿ ಟಿಕ್ರಿ ಗಡಿಯಲ್ಲಿ ಹುತಾತ್ಮರಾದ ರೈತ ಕಾಶ್ಮೀರ ಲಾಲ್ ಜಿ ಅವರ ಪುತ್ರ ಮಹ್ಮು ಜೋಯಾ ಗ್ರಾಮದ ರಾಜಿಂದರ್ ಕುಮಾರ್ ಅವರಿಗೆ ಉದ್ಯೋಗ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದರು ಹಾಗೂ ಕುಟುಂಬಕ್ಕೆ ಒಗ್ಗಟ್ಟು ವ್ಯಕ್ತಪಡಿಸಿದರು" ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್‌ನಲ್ಲಿ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries