ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮನ್ ಕಿ ಬಾತ್'ನ್ನು ಎಂದಿಗೂ ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ಹೇಳಿದ್ದಾರೆ.
ದೆಹಲಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಎಂದಿಗೂ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡಿಲ್ಲ. ಕೇವಲ ದೇಶದ ಸಂಸ್ಕೃತಿ, ಹಬ್ಬಗಳ ವೈವಿಧ್ಯತೆ, ಪರಿಸರ, ಮಹಿಳಾ ಉನ್ನತಿ ಮತ್ತು ಆಯುಷ್ಮಾನ್ ಭಾರತ್ ಕುರಿತು ಮಾತನಾಡಿದ್ದಾರೆ. ಕ್ರೀಡೆಗಳ ಮೇಲೆ ಕೇಂದ್ರೀಕರಿಸಿದ್ದಾರೆ. ಯುವ ಸಬಲೀಕರಣದ ಬಗ್ಗೆಯೂ ಮಾತನಾಡಿದ್ದಾರೆಂದು ಹೇಳಿದ್ದಾರೆ.
ಬಿಜೆಪಿ ಇದೀಗ ಪ್ರತಿ ತಿಂಗಳು 'ಮನ್ ಕಿ ಬಾತ್' ಕುರಿತು ಚರ್ಚಿಸಲು ಒಟ್ಟು 10.40 ಲಕ್ಷ ಬೂತ್‌ಗಳಲ್ಲಿ ಮೇ ತಿಂಗಳವರೆಗೆ ಸಭೆ ಸೇರಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.