ಕಾಸರಗೋಡು: ಮೀನುಗಾರರ ಸಾಲ ಮರುಪಾವತಿಗೆ ಕಾಲಾವಧಿ ಅವಕಾಶ ಆಯೋಗ ಅಹವಾಲು ಸ್ವೀಕಾರ ಸಭೆ ಆನ್ ಲೈನ್ ರೂಪದಲ್ಲಿ ಜರುಗಿತು. ಕಾಸರಗೋಡು ಜಿಲ್ಲೆಯ 20 ಕೇಸುಗಳನ್ನು ಪರಿಶೀಲಿಸಲಾಯಿತು. ವಿವಿಧ ಸಹಕಾರಿ ಸಂಘಗಳು, ಮತ್ಸ್ಯಫೆಡ್ ವ್ಯಾಪ್ತಿಯ ಸಂಘಗಳಿಂದ ಸಾಲ ಪಡೆದ 16 ಮಂದಿ ಮೀನುಗಾರರ ಸಾಲಗಳಿಗೆ 1,72,944 ರೂ.ನ ಸೌಲಭ್ಯ ಒದಗಿಸಲು ತೀರ್ಮಾನಿಸಲಾಗಿದೆ. ಆಯೋಗದ ಅಧ್ಯಕ್ಷ, ನ್ಯಾಯಮೂರ್ತಿ ಪಿ.ಎಸ್.ಗೋಪಿನಾಥನ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಕೆ.ಎ.ಲತೀಫ್, ಸಹಕಾರಿ ಇಲಾಖೆ ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು.