ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಹೆಚ್ಚಳದ ಭೀತಿ ದಲಾಲ್ ಸ್ಟ್ರೀಟ್‌ನಲ್ಲಿ ಹೆಚ್ಚುತ್ತಿರುವುದು, ವಿದೇಶಿ ಫಂಡ್‌ಗಳಿಂದ ಮಾರಾಟ ಹಾಗೂ ಯೂರೋಪ್‌ನ ಕೆಲ ಭಾಗಗಳಲ್ಲಿ ಹೊಸ ಕೋವಿಡ್-19 ಸೋಂಕು ಪ್ರಕರಣಗಳ ಏರಿಕೆಯು ಜಾಗತಿಕ ಮಟ್ಟದಲ್ಲಿ ಆರ್ಥಿಕ ಪ್ರಗತಿಯ ಪುನಶ್ಚೇತನ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಬಹುದು ಎಂಬ ಭೀತಿ ಕೂಡ ಇಂದಿನ ಕುಸಿತಕ್ಕೆ ಕಾರಣವಾಯಿತು.
ಸೋಮವಾರದ ಸೆನ್ಸೆಕ್ಸ್ ಕುಸಿತ ಆರು ತಿಂಗಳಲ್ಲೇ ಅತಿದೊಡ್ಡ ಕುಸಿತವಾಗಿದೆ. ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳ ಷೇರುಗಳು ಕೂಡಾ ಕುಸಿತಕ್ಕೆ ಕೊಡುಗೆ ನೀಡಿದ್ದು, ಭಾರ್ತಿ ಏರ್‌ಟೆಲ್ ಷೇರುಗಳ ಬೆಲೆ ಮಾತ್ರ ಶೇಕಡ 25ರಷ್ಟು ಶುಲ್ಕ ಹೆಚ್ಚಳದ ಬಳಿಕ ಶೇಕಡ 4ರಷ್ಟು ಹೆಚ್ಚಳ ಕಂಡಿದೆ.
ಸೋಮವಾರ ವಿದೇಶಿ ಪೋರ್ಟ್ ಫೋಲಿಯೊ ಹೂಡಿಕೆದಾರರ ನಿವ್ವಳ ಮಾರಾಟ 3439 ಕೋಟಿ ಆದರೆ, ದೇಶೀಯ ಸಂಸ್ಥೆಗಳು ನಿವ್ವಳ ರೂ. 2051 ಕೋಟಿ ಮೌಲ್ಯದ ಖರೀದಿಯನ್ನು ಕಂಡಿವೆ ಎಂದು ಬಿಎಸ್‌ಇ ಅಂಕಿ ಅಂಶಗಳು ತೋರಿಸುತ್ತವೆ.
ಸೆನ್ಸೆಕ್ಸ್‌ನ 30 ಅಂಶಗಳ ಪೈಕಿ 27 ಅಂಶಗಳು ಕೆಂಪಿನೊಂದಿಗೆ ಕೊನೆಗೊಂಡವು. ಇಂದಿನ ಕುಸಿತದಿಂದಾಗಿ ಹೂಡಿಕೆದಾರರು ಸುಮಾರು 6 ಲಕ್ಷ ಕೋಟಿಗಳಷ್ಟು ನಷ್ಟ ಹೊಂದಿದರು. ಬಿಎಸ್‌ಇ ಮಾರುಕಟ್ಟೆ ಬಂಡವಾಳ ಪ್ರಮಾಣ ಇದೀಗ 264 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.