ಕುಂಬಳೆ: ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಪೆಟ್ರೋಲ್ ಡೀಸೆಲ್ ದರವನ್ನು ಇಳಿಕೆ ಮಾಡದಿರುವ ಕೇರಳ ಸರ್ಕಾರದ ವಿರುದ್ದ ಬುಧವಾರ ಕುಂಬಳೆ ಪೇಟೆಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಮಣಿಕಂಠ ರೈ ಪಟ್ಲ ವಹಿಸಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಉತ್ತರ ವಲಯ ಉಪಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಮಾತನಾಡಿದರು. ಕಾರ್ಯಕ್ರಮ ದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿಜಯ ಕುಮಾರ್ ರೈ, ಮಂಡಲ ಕಾರ್ಯದರ್ಶಿ ರಮೇಶ್ ಭಟ್, ಮಂಡಲ ಒಬಿಸಿ ಮೋಚಾರ್Àದ ಅಧ್ಯಕ್ಷ ಚಂದ್ರಹಾಸ್ ಪೂಜಾರಿ, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಮಮತಾ ಕುಲಾಲ್, ಪ್ರದಾನ ಕಾರ್ಯದರ್ಶಿ ಪ್ರೇಮಾ ಶೆಟ್ಟಿ, ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಅಶ್ವಿನಿ ಪಜ್ವ, ಸರೋಜ ಆರ್.ಬಲ್ಲಾಳ್ ಜಿಲ್ಲಾ ಸಮಿತಿ ಸದಸ್ಯ ಹರೀಶ್ಚಂದ್ರ ಮಂಜೇಶ್ವರ, ಮಂಡಲ ಸಮಿತಿ ಸದಸ್ಯ ಬಾಲಕೃಷ್ಣ ಅಂಬಾರ್, ಪಂಚಾಯತಿ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ವಸಂತ್ ಕುಮಾರ್ ಮಯ್ಯ, ಲೋಕೇಶ್ ನೋಂಡ, ಸುನಿಲ್ ಕುಮಾರ್, ಸುಮಿತ್ ರಾಜ್, ಒಬಿಸಿ ಮಂಡಲ ಕಾರ್ಯದರ್ಶಿ ಅನಿಲ್ ಕುಮಾರ್, ಸಂತೋಷ ದೈಗೋಳಿ, ಯುವ ಮೋರ್ಚಾ ನೇತಾರ ಪ್ರದೀಪ್ ಬಂಬ್ರಾಣ, ಜಿಲ್ಲಾ ಪಂಚಾಯತಿ ಸದಸ್ಯ ನಾರಾಯಣ ನಾಯ್ಕ್ ಪೆರ್ಲ, ಮತ್ತು ಬ್ಲಾಕ್, ಪಂಚಾಯತಿ ಜನಪ್ರತಿನಿಧಿಗಳು, ಪಂಚಾಯತಿ, ಜಿಲ್ಲಾ, ಮಂಡಲ ನೇತಾರರು ನೇತೃತ್ವ ನೀಡಿದರು. ಮಂಡಲ ಪ್ರದಾನ ಕಾರ್ಯದರ್ಶಿ ಮುರಳೀಧರ ಯಾದವ್ ನಾಯ್ಕಾಪು ಸ್ವಾಗತಿಸಿ ವಂದಿಸಿದರು.