HEALTH TIPS

'ಇಲ್ಲಿಯ ಪಂಪ್ ನಿಂದ ಟ್ಯಾಂಕ್ ಭರ್ತಿ ಇಂಧನ ತುಂಬಿಸಿ: ಲಾಭವನ್ನು ಪಡೆದುಕೊಳ್ಳಿ': ಗಡಿಗಳಲ್ಲಿ ಗಮನ ಸೆಳೆಯುತ್ತಿರುವ ಮಲೆಯಾಳ ನೋಟೀಸ್

                                                       

                          ವಯನಾಡು: ಕರ್ನಾಟಕದಲ್ಲಿ ಇಂಧನ ತೆರಿಗೆ ಇಳಿಕೆಯಾಗಿರುವುದರಿಂದ ಪಂಪ್ ಮಾಲೀಕರು ಗರಿಷ್ಠ ಲಾಭ ಪಡೆಯುತ್ತಿದ್ದಾರೆ. ಇಂಧನ ಬೆಲೆ ಇಳಿಕೆ ಕುರಿತು ಪ್ರಚಾರ ಮಾಡಲು ಮಲಯಾಳಂ ಭಾಷೆಯಲ್ಲಿ ನೋಟೀಸ್ ಅಂಟಿಸಿ ಪಂಪ್ ಮಾಲೀಕರು ಕೇರಳದ ವಾಹನ ಸವಾರರನ್ನು ಸೆಳೆಯುತ್ತಿದ್ದಾರೆ. ಮಲಯಾಳಂನಲ್ಲಿ ಮುದ್ರಿತವಾಗಿರುವ ನೋಟೀಸ್ ನಲ್ಲಿ ಡೀಸೆಲ್ 7 ರೂ., ಪೆಟ್ರೋಲ್ 5 ರೂ. ಕಡಿಮೆಗೆ ಇಲ್ಲಿ ಲಭಿಸುತ್ತದೆ. ಇಲ್ಲಿಯ ಪಂಪ್ ನಿಂದ ಇಂಧನವನ್ನು ಭರ್ತಿ ಮಾಡಿ ಮತ್ತು ಕೊಡುಗೆಯ ಲಾಭವನ್ನು ಪಡೆದುಕೊಳ್ಳಿ ಎಂದು ಪೋಸ್ಟರ್‍ಗಳು ಗಮನ ಸೆಳೆಯುತ್ತಿವೆ. 

                    ಇಂಧನ ಬೆಲೆಯ ಮೇಲಿನ ತೆರಿಗೆಯನ್ನು ಕೇಂದ್ರ ಕಡಿಮೆ ಮಾಡಿದ ನಂತರ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ವ್ಯಾಟ್ ನ್ನು ಕಡಿಮೆ ಮಾಡಿದ್ದವು. ಆದರೆ ಕೇರಳದಲ್ಲಿ ತೆರಿಗೆ ಇಳಿಕೆ ಮಾಡುವುದಿಲ್ಲ ಎಂದು ರಾಜ್ಯ ಸರ್ಕಾರ ಪಟ್ಟು ಹಿಡಿದಿರುವುದು ಕೇರಳದಲ್ಲಿ ಇಂಧನ ಬೆಲೆ ಏರಿಕೆಗೆ ಕಾರಣವಾಗಿದೆ. ಇದರೊಂದಿಗೆ ಕೇರಳದ ಗಡಿ ಜಿಲ್ಲೆಗಳಿಂದ ಕರ್ನಾಟಕದ ಪಂಪ್ ಗಳಿಗೆ ಹರಿವು ಹೆಚ್ಚಿದೆ. ಪಂಪ್ ಮಾಲೀಕರೂ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಸಿದ್ಧಪಡಿಸಿರುವ ಮಲಯಾಳಂ ಸೂಚನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

                    ಕೇರಳದಿಂದ ಬರುವ ಸರಕು ವಾಹನಗಳು ಕರ್ನಾಟಕದಿಂದ ಫುಲ್ ಟ್ಯಾಂಕ್ ಇಂಧನ ತುಂಬಿಸಿಕೊಳ್ಳುತ್ತಿವೆ. ವಯನಾಡಿನಿಂದ ಸರಕು ಸಾಗಿಸುವ ವಾಹನಗಳು ಹಿಂತಿರುಗುವಾಗಲೂ ಕರ್ನಾಟಕದಿಂದಲೇ ಇಂಧನ ತುಂಬಿಸಿಕೊಳ್ಳುತ್ತಿವೆ. ಕೇರಳಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಶನಿವಾರ ಡೀಸೆಲ್ 7 ರೂ., ಪೆಟ್ರೋಲ್ ಬೆಲೆ 5 ರೂ. ಇತ್ತು. ಬೆಲೆ ಕುಸಿತದೊಂದಿಗೆ, ವಯನಾಡಿನ ತೊಲ್ಪೆಟ್ಟಿ ಮತ್ತು ಸುತ್ತಮುತ್ತಲಿನ ಜನರು ಇಂಧನ ತುಂಬಲು ಕರ್ನಾಟಕದ ಕುಟ್ಟಂನಲ್ಲಿರುವ ಪಂಪ್‍ಗೆ ದೌಡಾಯಿಸುತ್ತಿರುವುದು ಕಂಡುಬಂದಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries