ಮುಳ್ಳೇರಿಯ: ಮುಳಿಯಾರು ಗ್ರಾಮ ಪಂಚಾಯತ್, ಹಸಿರು ಕ್ರಿಯಾ ಸೇನೆ ಮತ್ತು ಕುಟುಂಬಶ್ರೀ ಸಿ.ಡಿ.ಎಸ್. ನೇತೃತ್ವದಲ್ಲಿ ಅಗ್ರಿ ನ್ಯೂಟ್ರಿ ಗಾರ್ಡನ್ ಯೋಜನೆಯ ಅಂಗವಾಗಿ ತರಕಾರಿ ಕೃಷಿ ಆರಂಭಿಸಲಾಗಿದೆ.
ಹಸಿರು ಕ್ರಿಯಾ ಸೇನೆಗಳ ನೇತೃಥ್ವದಲ್ಲಿ 3 ಗುಂಪುಗಳನ್ನು 3 ಜೆ.ಎಲ್.ಜಿ.ಗಳಾಗಿ ವಿಂಗಡಿ ಸಿ.ಡಿ.ಎಸ್.ನಲ್ಲಿ ನೋಂದಣಿ ನಡೆಸಿ ಬಂಜರಾಗಿರುವ ಮುಳಿಯಾರಿನ 2 ಎಕ್ರೆ ಜಾಗದಲ್ಲಿ ಈ ತರಕಾರಿ ಕೃಷಿ ಆರಂಭಿಸಲಾಗಿದೆ.
ಶಾಸಕ ನ್ಯಾಯವಾದಿ ಸಿ.ಎಚ್.ಕುಂಞಂಬು ಈ ಸಂಬಂಧ ಜರಗಿದ ಸಮಾರಂಭದಲ್ಲಿ ಯೋಜನೆಯನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷೆ ಪಿ.ವಿ.ಮಿನಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜನಾರ್ದನನ್, ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ಇ.ಮೋಹನನ್, ಅನೀಸಾ ಮನ್ಸೂರ್, ಬ್ಲಾಕ್ ಪಂಚಾಯತಿ ಸದಸ್ಯ ಕುಂಞಂಬು, ಪಂಚಾಯತಿ ಸದಸ್ಯರಾದ ನಾರಾಯಣನ್ ಕುಟ್ಟಿ, ಶ್ಯಾಮಲಾ, ಅನನ್ಯಾ, ರಮೇಶನ್, ಸತ್ಯಾವತಿ, ಹಸಿರು ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಚಾಲಕ ಟಿ.ಟಿ.ಸುರೇಂದ್ರನ್, ಸಿ.ಡಿ.ಎಸ್.ಅಧ್ಯಕ್ಷೆ ಪ್ರೇಮಾವತಿ, ಎ.ಡಿ.ಎಂ.ಸಿ.ಸುರೇಂದ್ರನ್, ಹಸಿರು ಕೇರಳಂ ಮಿಷನ್ ಆರ್.ಪಿ.ಲೋಹಿತಾಕ್ಷನ್ ಮೊದಲಾದವರು ಉಪಸ್ಥಿತರಿದ್ದರು.