ಮುಳ್ಳೇರಿಯ: ಕ್ಯಾಂಪ್ಕೋ ಅಡೂರು ಶಾಖೆಯ ಸಕ್ರಿಯ ಸದಸ್ಯ ಸುಂದರ ನಾಯ್ಕ ಅವರ ಹೃದಯ ಶಸ್ತ್ರಚಿಕಿತ್ಸೆಗೆ ಕ್ಯಾಂಪ್ಕೋ ಚಿತ್ತ ಸದಸ್ಯರ ಆರೋಗ್ಯದತ್ತ ಯೋಜನೆಯಡಿಯಲ್ಲಿ ನೆರವನ್ನು ನೀಡಲಾಯಿತು.
ಕ್ಯಾಂಪ್ಕೋ ಉಪಾಧ್ಯಕ್ಷ ಎಸ್.ಎನ್. ಭಟ್ ಖಂಡಿಗೆ 50000 ರೂಪಾಯಿಯ ಚೆಕ್ ನ್ನು ಫಲಾನುಭವಿಗೆ ಹಸ್ತಾಂತರಿಸಿದರು. ನಿರ್ದೇಶಕ ಸತ್ಯನಾರಾಯಣ ಪ್ರಸಾದ್, ಬದಿಯಡ್ಕ ವಲಯ ಪ್ರಬಂಧಕ ಗಿರೀಶ್ ಇ., ಪಂಜಿಕಲ್ಲು ಶಾಖಾ ಪ್ರಬಂಧಕ ಸಂತೋಷ್ ಕಂಬಳಿ ಜೊತೆಗಿದ್ದರು.