ಕಾಸರಗೋಡು: ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ತೆರಿಗೆ ಕಡಿತಗೊಳಿಸುವಲ್ಲಿ ಕೇರಳ ಸರ್ಕಾರ ಮುಂದಾಗದ ಕ್ರಮ ಖಂಡಿಸಿ ಯುವಮೋರ್ಚಾ ವತಿಯಿಂದ ಗುರುವಾರ ಕಾಸರಗೋಡು ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭ ಮುಖ್ಯಮಂತ್ರಿಯ ಪ್ರತಿಕೃತಿ ದಹಿಸುವ ಮೂಲಕ ತಮ್ಮ ರೋಷ ವ್ಯಕ್ತಪಡಿಸಿದರು. ಯುವಮೋರ್ಚಾ ಜಿಲ್ಲಾಧ್ಯಕ್ಷ ಧನಂಜಯ ಮಧೂರು ಧರಣಿ ಉದ್ಘಾಟಿಸಿದರು.
ಕೇಂದ್ರ ಸರ್ಕಾರ ಇಂಧನ ಬೆಲೆ ಕಡಿತಗೊಳಿಸಿರುವುದಲ್ಲದೆ, ಬಿಜೆಪಿ ಆಡಳಿತವಿರುವ ರಾಜ್ಯಗಳೂ ತೆರಿಗೆ ಕಡಿತಗೊಳಿಸಿದೆ. ಆದರೆ ಕೇರಳ ಸರ್ಕಾರ ತೆರಿಗೆ ಕಡಿತಗೊಳಿಸದೆ ಜನರನ್ನು ವಂಚಿಸುತ್ತಿರುವುದಾಗಿ ಪ್ರತಿಭಟನಾಕಾರರು ದೂರಿದ್ದಾರೆ. ಕಾರ್ಯದರ್ಶಿ ಜಿತೇಶ್ ಅಧ್ಯಕ್ಷತೆ ವಹಿಸಿದ್ದರು. ಅಜಿತ್ ಕುಮಾರ್, ಅರ್ಪಿತ್ ದ್ವಾರಕಾ ಮುಂತಾದವರು ಉಪಸ್ಥಿತರಿದ್ದರು.