ತಿರುವನಂತಪುರ: ಆರೋಗ್ಯ ಕ್ಷೇತ್ರದಲ್ಲಿ ಇ-ಆಡಳಿತ ಸೇವೆಗಳನ್ನು ಒದಗಿಸುವ ಮೂಲಕ ಒಪಿ ಟಿಕೆಟ್‍ಗಳನ್ನು ಆನ್‍ಲೈನ್‍ನಲ್ಲಿ ಬುಕ್ ಮಾಡುವ ಸೌಲಭ್ಯ ಪ್ರಾರಂಭಿಸಲಾಗಿದೆ. ಇ-ಹೆಲ್ತ್ ವೆಬ್ ಪೆÇೀರ್ಟಲ್ (https://ehealth.kerala.gov.in) ಮೂಲಕ ಇಂತಹ ಅನುಕೂಲ ಸಾಧ್ಯವಾಗಲಿದೆ. ಇದರ ಪ್ರಕಾರ ಇ-ಹೆಲ್ತ್ ಅಳವಡಿಸಿರುವ ಆಸ್ಪತ್ರೆಗಳಲ್ಲಿ ಆನ್ ಲೈನ್ ಬುಕ್ಕಿಂಗ್ ಜಾರಿಯಾಗಲಿದೆ.
ರಾಜ್ಯದಲ್ಲಿ 300 ಕ್ಕೂ ಹೆಚ್ಚು ಆಸ್ಪತ್ರೆಗಳು ಇ-ಹೆಲ್ತ್ ಸೌಲಭ್ಯಗಳನ್ನು ಹೊಂದಿವೆ. ಮುಂಗಡ ಆನ್‍ಲೈನ್ ಬುಕಿಂಗ್ ಮೂಲಕ ವೈದ್ಯರ ಸೇವೆಯು ನಿಗದಿತ ದಿನಾಂಕ ಮತ್ತು ಸಮಯದಲ್ಲಿ ಇಲ್ಲಿ ಲಭ್ಯವಿದೆ. ಒಪಿ ಟಿಕೆಟ್‍ಗಳು ಮತ್ತು ಟೋಕನ್ ಸ್ಲಿಪ್‍ಗಳನ್ನು ಈ ಮೂಲಕ ಪಡೆಯಬಹುದು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೂನಿಕ್ ಹೆಲ್ತ್ ಐಡಿ ಕೂಡ ಇದೇ ವೆಬ್ ಪೆÇೀರ್ಟಲ್ ಮೂಲಕ ಲಭ್ಯವಿದೆ. ಆಸ್ಪತ್ರೆ, ಲಭ್ಯವಿರುವ ಸೇವೆಗಳು, ಚಿಕಿತ್ಸೆಯ ಸಮಯ ಮತ್ತು ಲ್ಯಾಬ್ ಪರೀಕ್ಷೆಗಳ ಬಗ್ಗೆ ಮಾಹಿತಿಯನ್ನು ಸಹ ಪೆÇೀರ್ಟಲ್‍ನಲ್ಲಿ ಪ್ರಕಟಿಸಲಾಗುತ್ತದೆ.