ನವದೆಹಲಿ: ಅಂತಾರಾಷ್ಟ್ರೀಯ ವಿಮಾನ ಸೇವೆ ಈ ವರ್ಷಾಂತ್ಯದ ವೇಳೆಗೆ ಸಾಮಾನ್ಯ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ ಎಂದು ನಾಗರಿಕ ವಿಮಾನಯಾನ ಕಾರ್ಯದರ್ಶಿ ರಾಜೀವ್ ಬನ್ಸಾಲ್ ಅವರು ಬುಧವಾರ ಹೇಳಿದ್ದಾರೆ.
ನವದೆಹಲಿ: ಅಂತಾರಾಷ್ಟ್ರೀಯ ವಿಮಾನ ಸೇವೆ ಈ ವರ್ಷಾಂತ್ಯದ ವೇಳೆಗೆ ಸಾಮಾನ್ಯ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ ಎಂದು ನಾಗರಿಕ ವಿಮಾನಯಾನ ಕಾರ್ಯದರ್ಶಿ ರಾಜೀವ್ ಬನ್ಸಾಲ್ ಅವರು ಬುಧವಾರ ಹೇಳಿದ್ದಾರೆ.
ಅಂತಾರಾಷ್ಟ್ರೀಯ ವಿಮಾನ ಸೇವೆ ಶೀಘ್ರದಲ್ಲೇ ಸಹಜ ಸ್ಥಿತಿಗೆ ಮರಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಬನ್ಸಾಲ್ ಹೇಳಿದ್ದಾರೆ.
ನಾಗರಿಕ ವಿಮಾನಯಾನ ಮಹಾನಿರ್ದೇಶಕರು(DGCA) ಅಕ್ಟೋಬರ್ 29 ರಂದು ನಿಗದಿತ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ವಿಮಾನಯಾನಕ್ಕೆ ನವೆಂಬರ್ 30ರವರೆಗೆ ನಿರ್ಬಂಧ ಹೇರಿದ್ದಾರೆ. ಆದಾಗ್ಯೂ ಡಿಜಿಸಿಎ ಸೂಚನೆಯ ಮೇರೆಗೆ ಅಂತಾರಾಷ್ಟ್ರೀಯ ಎಲ್ಲಾ ಸರಕು ಸೇವೆಗೆ ನಿರ್ದಿಷ್ಟವಾಗಿ ಅನುಮೋದಿಸಲಾದ ವಿಮಾನಗಳಿಗೆ ನಿರ್ಬಂಧವಿರುವುದಿಲ್ಲ. ಅಂತಾರಾಷ್ಟ್ರೀಯ ನಿಗದಿತ ವಿಮಾನಗಳು ಕೇಸ್-ಟು-ಕೇಸ್ ಆಧಾರದ ಮೇಲೆ ಆಯ್ದ ಮಾರ್ಗಗಳಲ್ಲಿ ಚಲಿಸಬಹುದು ಎಂದು ಡಿಜಿಸಿಎ ಹೇಳಿದೆ.
ಡಿಸೆಂಬರ್ ಅಂತ್ಯದ ವೇಳೆಗೆ ಏರ್ ಇಂಡಿಯಾ ಹಸ್ತಾಂತರ ಸಾಧ್ಯತೆ
ಇನ್ನೂ ನಷ್ಟದಲ್ಲಿರುವ ಏರ್ ಇಂಡಿಯಾದ ಬಗ್ಗೆ ಮಾತನಾಡಿದ ರಾಜೀವ್ ಬನ್ಸಾಲ್, ವರ್ಷಾಂತ್ಯದೊಳಗೆ ಅದನ್ನು ಟಾಟಾ ಸಮೂಹಕ್ಕೆ ಹಸ್ತಾಂತರಿಸುವ ಸಾಧ್ಯತೆಯಿದೆ. ನಾವು ಡಿಸೆಂಬರ್ ಅಂತ್ಯದೊಳಗೆ ಏರ್ ಇಂಡಿಯಾದ ಎಲ್ಲಾ ಕಾರ್ಯಾಚರಣೆಗಳನ್ನು ಹಸ್ತಾಂತರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರವು ಏರ್ ಇಂಡಿಯಾದಲ್ಲಿನ ತನ್ನ ಶೇ. 100 ರಷ್ಟು ಪಾಲನ್ನು ಟಾಟಾ ಗ್ರೂಪ್‌ಗೆ 18,000 ಕೋಟಿ ರೂ.ಗೆ ಮಾರಾಟ ಮಾಡುವುದನ್ನು ದೃಢೀಕರಿಸುವ ಪತ್ರವನ್ನು (ಎಲ್‌ಒಐ) ಬಿಡುಗಡೆ ಮಾಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.