ಕೋಝಿಕ್ಕೋಡ್: ಹಲಾಲ್ ಸಂಸ್ಕೃತಿಯನ್ನು ಹುಟ್ಟು ಹಾಕುವುದರ ಹಿಂದೆ ಸ್ಪಷ್ಟ ಅಜೆಂಡಾ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ. ಇತರ ಪಕ್ಷಗಳು ಆ ಕಾರ್ಯಸೂಚಿಯನ್ನು ಗುರುತಿಸಲು ಸಾಧ್ಯವಾಗದಿದ್ದರೂ, ಬಿಜೆಪಿಯು ಅದನ್ನು ಗುರುತಿಸಿದೆ ಎಂದು ಕೋಝಿಕ್ಕೋಡ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು.
ಹಲಾಲ್ ಎನ್ನುವುದು ಧಾರ್ಮಿಕ ಉಗ್ರಗಾಮಿಗಳ ಆಹಾರ ಮತ್ತು ಬಟ್ಟೆಯ ಮೇಲೆ ಜನರನ್ನು ವಿಭಜಿಸುವ ಪ್ರಯತ್ನದ ಭಾಗವಾಗಿದೆ. ಹಲಾಲ್ ವಿದ್ಯಮಾನವು ಕೇರಳದಲ್ಲಿ ವೇಗವಾಗಿ ಹರಡುತ್ತಿದೆ. ಇದು ನಿಷ್ಕಪಟವಲ್ಲ. ಇದರ ಹಿಂದೆ ಜನರನ್ನು ವಿಭಜಿಸಿ ಧಾರ್ಮಿಕ ಕಲಹ ಸೃಷ್ಟಿಸುವ ಉದ್ದೇಶಪೂರ್ವಕ ನಡೆ ಇದೆ ಎಂದರು.
ಪಾಲಕ್ಕಾಡ್ ಆರ್‍ಎಸ್‍ಎಸ್ ಮಂಡಲದ ಭೌದ್ದಿಕ್ ಪ್ರಮುಖ್ ಸಂಜಿತ್ ಹತ್ಯೆಯಾಗಿ ಒಂದು ವಾರ ಕಳೆದರೂ ಕೇರಳ ಪೋಲೀಸರಿಗೆ ಒಂದೇ ಒಂದು ಸುಳಿವು ಸಿಕ್ಕಿಲ್ಲ ಎಂದು ಹೇಳಿದರೆ ನಂಬಲು ಸಾಧ್ಯವಿಲ್ಲ. ಪೋಲೀಸರಿಗೆ ಉಗ್ರಗಾಮಿಗಳ ನೆರವು ಇದೆಯೇ ಎಂಬ ಅನುಮಾನ ಮೂಡಿದೆ ಎಂದು ಕೆ.ಸುರೇಂದ್ರನ್ ಹೇಳಿದ್ದಾರೆ.