ಬದಿಯಡ್ಕ: ಲಯನ್ಸ್ ಕ್ಲಬ್ ಚೆರ್ಕಳದ ವತಿಯಿಂದ ಕೌಟುಂಬಿಕ ಸಮ್ಮಿಲನ, ವೈಯುಕ್ತಿಕ ಸಮ್ಮಿಲನ ಹಾಗೂ ಅಭಿನಂದನಾ ಸಮಾರಂಭ ನಡೆಯಿತು.
ಪೆÇಯಿನಾಚಿ ಆಶೀರ್ವಾದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕ್ಲಬ್ ಅಧ್ಯಕ್ಷ ಮೊಯ್ದೀನ್ ಚಾಪಾಡಿ ಅಧ್ಯಕ್ಷತೆ ವಹಿಸಿದ್ದರು.
ವಲಯ ಅಧ್ಯಕ್ಷ ಲಯನ್ ಸುಕುಮಾರನ್ ನಾಯರ್ ಆಶಯ ಭಾಷಣ ಮಾಡಿದರು. ಲಯನ್ಸ್ ಜಿಲ್ಲಾ ಹೆಚ್ಚುವರಿ ಕ್ಯಾಬಿನೆಟ್ ಕಾರ್ಯದರ್ಶಿ ನ್ಯಾಯವಾದಿ. ವಿನೋದ್ ಕುಮಾರ್, ಅಂತರಾಷ್ಟ್ರೀಯ ತರಬೇತುದಾರ ಲಯನ್ ವಿ ವೇಣು ಗೋಪಾಲನ್ ತರಗತಿಯನ್ನು ಮುನ್ನಡೆಸಿದರು. ಕುಟುಂಬ ಸಹಿತ ಕ್ಯಾನ್ಸರ್ ರೋಗಿಗಳಿಗೆ ತಮ್ಮ ಕೂದಲನ್ನು ದಾನ ಮಾಡಿದ ರಹೀಮ್ ತೆರುವತ್ ಮತ್ತು ಸಿಪಿಎಂ ಬೇವಿಂಜೆ ಶಾಖಾ ಕಾರ್ಯದರ್ಶಿ ಲಯನ್ ಕಬೀರ್ ಉಗ್ರಾಣಿ, ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಸ್ವಾನ ಫಾತಿಮಾ ಮಲ್ಲ, ಕೋಶಾಧಿಕಾರಿ ಮಾರ್ಕ್ ಮುಹಮ್ಮದ್, ಶರೀಫ್ ಬೋಸ್, ನಿಸಾರ್ ಕಲ್ಲಟ್ರ, ಅನೀಸಾ ಮನ್ಸೂರ್ ಮಲ್ಲ, ಜಾಸಿರ್ ಚೆಂಗಳ, ಎಂ.ಎ. ನಾಸರ್ ಉಪಸ್ಥಿತರಿದ್ದು ಮಾತನಾಡಿದರು. ಎಂ.ಎಫ್.ಜೆ. ಕಾರ್ಯದರ್ಶಿ ಫೈಸಲ್ ಪೊವ್ವಲ್ ಸ್ವಾಗತಿಸಿ ವಂದಿಸಿದರು.