ಕುಂಬಳೆ: ಬಹುಭಾಷಾ ಸಂಗಮ ಭೂಮಿ ಕಾಸರಗೋಡು ಜಿಲ್ಲೆಯ ಮಣ್ಣಿನಲ್ಲಿ ಉನ್ನತ ಶಿಕ್ಷಣ ರಂಗದಲ್ಲಿ ವೈಜ್ಞಾನಿಕ ವಿಸ್ತರಣೆಯ ನೂತನ ಸಾಧ್ಯತೆಗಳನ್ನು ಅನುಷ್ಠಾನಕ್ಕೆ ತರಲು ರಾಜ್ಯ ಸರಕಾರ ಪ್ರತಿಜ್ಞಾ ಬದ್ಧವಾಗಿದೆ ಎಂದು ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು ತಿಳಿಸಿದರು.
ಕುಂಬಳೆಯ ಐ.ಎಚ್.ಆರ್.ಡಿ. ಕಾಲೇಜು ಕ್ಯಾಂಪಸ್ ನಲ್ಲಿ ನೂತನ ತರಗತಿ ಕೊಠಡಿಗಳನ್ನು ಅವರು ಉದ್ಘಾಟಿಸಿ ಮಾತನಾಡಿದರು. ಮಂಜೇಶ್ವರದ ಮಾಜಿ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಅವರ ಸ್ಥಳೀಯ ಅಭಿವೃದ್ಧಿ ನಿಧಿ ಬಳಸಿ ನಿರ್ಮಿಸಲಾದ ಕೊಠಡಿಗಳಿವು.
ಉನ್ನತ ಶಿಕ್ಷಣ ವಲಯದ ಸಂಸ್ಥೆಗಳನ್ನು ಸುಧಾರಿತಗೊಳಿಸಲಾಗುವುದು. ಇದರ ಅಂಗವಾಗಿ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಸರಕಾರ ಖಚಿತಪಡಿಸಲಿದೆ. ಕಾಸರಗೋಡಿನ ಉನ್ನತ ಶಿಕ್ಷಣಾಲಯಗಳಲ್ಲಿ ಹೆಚ್ಚುವರಿ ವಿದ್ಯಾರ್ಥಿಗಳ ಕಲಿಕೆಗೆ ಅವಕಾಶ ಒದಗಿಸುವುದು ಸರಕಾರದ ಆದ್ಯತೆಯಾಗಿದೆ ಎಂದವರು ತಿಳಿಸಿದರು.
ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಗ್ರಾಮ ಪಂಚಾಯತ್ ಸದಸ್ಯೆ ಯು.ಪಿ.ತಾಹಿರಾ ಮೊದಲಾದ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಪ್ರಾಂಶುಪಾಲೆ ನಳಿನಿ ಕೆ.ವಿ. ಸ್ವಾಗತಿಸಿದರು. ಕಚೇರಿ ವರಿಷ್ಠಾಧಿಕಾರಿ ಪಿ.ಎಸ್.ಅಜಯಕುಮಾರ್ ವಂದಿಸಿದರು.
..