ಕೊಚ್ಚಿ: ಚೆಂಗಮನಾಡು ಮೂಲದ ಜಿಜೋ ತಂಕಚನ್ ಅವರು ಮಕ್ಕಳಿಲ್ಲ ಎಂಬ ಕೊರಗಿಂದ ಪಾರಾಗಲು ಖರೀದಿಸಿದ್ದ ಶ್ವಾನವನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ. ಪೋಲೀಸ್ ಇನ್ಸ್‍ಪೆಕ್ಟರ್ ನಿಂದ ಥಳಿಸಲ್ಪಟ್ಟ ನಂತರ ತನ್ನ ಪ್ರಾಣವನ್ನು ಕಳೆದುಕೊಂಡ ಪಿಕ್ಸೀಯ ನೆನೆದು ಜಿಜೋ ಖಿನ್ನರಾಗಿದ್ದಾರೆ.
ಜಿಜೋ ಮದುವೆಯಾಗಿ ಏಳು ವರ್ಷಗಳಾಗಿವೆ. ಅವರಿಗೆ ಮಕ್ಕಳಿಲ್ಲದ ಕಾರಣ ಪಿಕ್ಸಿಯನ್ನು ಖರೀದಿಸಲು ಮತ್ತು ಬೆಳೆಸಲು ನಿರ್ಧರಿಸಿದರು. 'ನಾನು ಊಟ ಮಾಡಿಸಿ ಬೆಳೆಸಿದವನು. ನನಗೆ ಮಕ್ಕಳಿಲ್ಲ ಸಾರ್. ಬದಲಾಗಿ ಅದನ್ನು ಪೆÇೀಷಿಸುತ್ತಿದ್ದೆ ' ಎಂದು ಜಿಜೋ ಹೇಳಿದರು.
ದೂರಿನ ಪ್ರಕಾರ ಚೆಂಗಮನಾಡು ಪೋಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪಿಕ್ಸಿ ಎಂಬ ನಾಯಿಯನ್ನು ಮರದ ಕೋಲಿನಿಂದ ಹೊಡೆದು ಕೊಂದಿದ್ದಾರೆ. ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಮೇರಿ ಎಂಬವರ ಪುತ್ರ ಜಸ್ಟಿನ್ ನನ್ನು ಬಂಧಿಸಲು ಇನ್ಸ್ ಪೆಕ್ಟರ್ ಮನೆಗೆ ಹೋದಾಗ ನಾಯಿಗೆ ಥಳಿಸಲಾಗಿದೆ ಎಂದು ಎಸ್ಪಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
'ನೀವು ನಾಯಿ ಎಂದು ತಾತ್ಸಾರ ಮಾಡಬಹುದು , ಅಲ್ಲವೇ? ಇವತ್ತೂ ಅಮ್ಮ ಊಟ ಕೊಟ್ಟಳು. ಆಮೇಲೆ ತಿನ್ನು' ಎಂದು ನಾಯಿಯನ್ನು ಹೆಗಲ ಮೇಲೆ ಹೊತ್ತಿದ್ದರು ಎಂದು ಜಿಜೋ ಪೋಲೀಸ್ ಠಾಣೆಯಲ್ಲಿ ಅವಲತ್ತುಕೊಂಡರು. 'ಮನೆಗೆ ಆರೋಪಿಯನ್ನು ಹುಡುಕಿಕೊಂಡು ಬಂದ ಪೋಲೀಸರು ಆರೋಪಿಗಳು ಓಡಿ ಹೋಗಿದ್ದಾರೆಯೇ ಅಥವಾ ಅಲ್ಲೆಲ್ಲಾದರೂ ಇದ್ದಾರೆಯೇ ಎಂದು ಅರ್ಥಮಾಡಿಕೊಳ್ಳಬಹುದು. ಆದರೆ ಕಟ್ಟಿಹಾಕಲ್ಪಟ್ಟಿದ್ದ, ಪ್ರತಿಕ್ರಿಯೆ ನೀಡಲು ಸಾಧ್ಯವಾಗದವರ ಮೇಲೆ ಪೋಲೀಸರು ಥಳಿಸುವ ಅಗತ್ಯವೇನಿತ್ತು? ಎಂದು ಜಿಜೋ ಪ್ರಶ್ನಿಸಿದ್ದಾರೆ.
ಘಟನೆಯ ಬಗ್ಗೆ ದೂರು ನೀಡಲು ಠಾಣೆಗೆ ಆಗಮಿಸಿದ ಜಿಜೋ ದೂರಿಗೆ ಅಧಿಕಾರಿಗಳಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ ಎಂದು ಜಿಜೋ ಹೇಳಿದರು. ನಾಯಿಯ ತಲೆಗೆ ಪೆಟ್ಟು ಬಿದ್ದಿದೆ ಎಂದು ಪ್ರಮಾಣೀಕರಿಸುವಂತೆ ನಾಯಿಗೆ ಚಿಕಿತ್ಸೆ ನೀಡಿದ ವೈದ್ಯರನ್ನು ಸಂಪರ್ಕಿಸಿದರೂ ಆಗಲಿಲ್ಲ. ಸರಕಾರಿ ವೈದ್ಯರೇ ಪರೀಕ್ಷಿಸಿ ಪ್ರಮಾಣ ಪತ್ರ ನೀಡಬೇಕು ಎಂದು ನಿರಾಕರಿಸಿದರು. ಇದರ ಬೆನ್ನಲ್ಲೇ ಶವಾಗಾರದಲ್ಲಿ ಇಡಲು ಹುಡುಕಾಡಿದರೂ ಅಗತ್ಯ ಬಾಕ್ಸ್ ಸಿಗದೇ ಇದ್ದಾಗ ಮನೆಯಲ್ಲಿ ಆಹಾರ ಪದಾರ್ಥಗಳನ್ನು ಇಟ್ಟಿದ್ದ ಫ್ರಿಡ್ಜ್ ಖಾಲಿ ಮಾಡಿ ಶವವನ್ನು ಅದರಲ್ಲಿಟ್ಟಿದ್ದರು. ಪಿಕ್ಸೀಗೆ ಥಳಿಸಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕುಟುಂಬದವರು ಆಗ್ರಹಿಸಿದ್ದಾರೆ.