ಕಾಸರಗೋಡು: ಕೇರಳಕ್ಕೆ ಮಂಜೂರಾಗಿರುವ ಏಮ್ಸ್ ಆಸ್ಪತ್ರೆಯನ್ನು ಕಾಸರಗೋಡಿಗೆ ಮಂಜೂರುಗೊಳಿಸುವಂತೆ 'ಏಮ್ಸ್ ಕಾಸರಗೋಡು ಜನಪರ ಒಕ್ಕೂಟ'ವತಿಯಿಂದ ಬುಧವಾರ ನಡೆದ ಹಕ್ಕೊತ್ತಾಯ ರ್ಯಾಲಿಯಲ್ಲಿ ಜನರ ಘೋಷಣೆ ಮುಗಿಲುಮುಟ್ಟಲು ಕಾರಣವಾಯಿತು. ಕರಂದಕ್ಕಾಡ್ ಜಂಕ್ಷನ್‍ನಿಂದ ಆರಂಭಗೊಂಡ ಬಹುಜನ ರ್ಯಾಲಿ ಕೋರ್ಟ್ ರಸ್ತೆ, ಟ್ರಾಫಿಕ್ ಐಲ್ಯಾಂಡ್, ಎಂ.ಜಿ ರಸ್ತೆ ಮೂಲಕ ಹೊಸ ಬಸ್ ನಿಲ್ದಾಣ ವಠಾರದಲ್ಲಿ ಸಂಪನ್ನಗೊಂಡಿತು.
ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಧರಣಿ ಉದ್ಘಾಟಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಗಣೇಶನ್ ಅರಮಂಗಾನ ಅಧ್ಯಕ್ಷತೆ ವಹಿಸಿದ್ದರು. ವ್ಯಾಪಾರಿ ವ್ಯವಸಾಯಿ ಏಖೋಪನಾ ಸಮಿತಿ ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ಅಹಮ್ಮದ್ ಶೆರೀಫ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಾಸಕರಾದ ಎನ್.ಎ ನೆಲ್ಲಿಕುನ್ನು, ಎ.ಕೆ.ಎಂ ಅಶ್ರಫ್ ಉಪಸ್ಥಿತರಿದ್ದರು. ಕೆ.ಜಿ ಸಜಿ ವಿಷಯ ಮಂಡಿಸಿದರು. ನೂರಾರು ಮಂದಿ ಮಹಿಳೆಯರೂ ಸೇರಿದಂತೆ ವಿವಿಧ ರಾಜಕೀಯ, ಸಾಂಸ್ಕøತಿಕ, ಧಾರ್ಮಿಕ ಸಂಘಟನೆಗಳ ಮುಖಂಡರು, ಕಾರ್ಮಿಕರು ಧರಣಿಯಲ್ಲಿ ಪಾಲ್ಗೊಂಡರು.