HEALTH TIPS

ಅಧಿಕಾರ ವಿಕೇಂದ್ರೀಕರಣ ಯುಡಿಎಫ್ ನ ಕೊಡುಗೆ: ಸಂಸದ ಕೆ ಮುರಳೀಧರನ್

                  ಕಾಸರಗೋಡು: ಮಹಾತ್ಮ ಗಾಂಧೀಜಿಯವರ ಕನಸಾದ ಗ್ರಾಮ ಸ್ವರಾಜ್ಯ ಕನಸನ್ನು ನನಸು ಮಾಡುವಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಸಂಸದ ಕೆ.ಮುರಳೀಧರನ್ ಹೇಳಿದರು.

                   ವಿವಿಧ ಕಾಲಘಟ್ಟದಲ್ಲಿ ಸ್ಥಳೀಯ ಸರ್ಕಾರಗಳಿಗೆ ಹೆಚ್ಚಿನ ಅಧಿಕಾರ ಹಸ್ತಾಂತರವಾಗಿರುವುದರಿಂದ ಕೇರಳದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ವಿಶ್ವಕ್ಕೆ ಮಾದರಿಯಾಗಿದೆ. ವಿಕೇಂದ್ರೀಕರಣ ಮತ್ತು ಯೋಜನೆಯಲ್ಲಿ ಕೇರಳ ಇತರ ರಾಜ್ಯಗಳಿಗಿಂತ ಬಹಳ ಮುಂದಿದೆ. ವಿಕೇಂದ್ರೀಕರಣವನ್ನು ಅನುಷ್ಠಾನಗೊಳಿಸುವಲ್ಲಿ ಯುಡಿಎಫ್ ಮತ್ತು ವಿಶೇಷವಾಗಿ ಮುಸ್ಲಿಂ ಲೀಗ್ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.

                     ಮುಸ್ಲಿಂ ಲೀಗ್ ಜಿಲ್ಲಾ ಸಮಿತಿ ಕಾಸರಗೋಡು ನಗರಸಭಾ ಸಭಾಂಗಣದಲ್ಲಿ ಆಯೋಜಿಸಿದ್ದ ಅ|ಧಿಕಾರ ವಿಕೇಂದ್ರೀಕರಣದ 26ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

                 ಯುಡಿಎಫ್ ಸರ್ಕಾರ ಅನುಷ್ಠಾನಗೊಳಿಸಿದ ಅಧಿಕಾರ ವಿಕೇಂದ್ರೀಕರಣ ಯೋಜನೆಯನ್ನು ಎಲ್.ಡಿ.ಎಫ್ ಸರ್ಕಾರವು ನಿರ್ವೀರ್ಯಗೊಳಿಸುತ್ತಿದೆ. ಪಂಚಾಯತಿಗಳಲ್ಲಿ ಅನೇಕ ಹಕ್ಕು-ಅಧಿಕಾರಗಳನ್ನು ಕಸಿದುಕೊಂಡಿದೆ. ಪ್ರಸ್ತುತ ಕೇರಳದಲ್ಲಿ ಒಬ್ಬ ಪಕ್ಷ-ವ್ಯಕ್ತಿಯನ್ನು ಕೇಂದ್ರೀಕರಿಸಿ ಸರ್ಕಾರವು ಅ|ಧಿಕಾರ ನಡೆಸುತ್ತಿದೆ. ಪಂಚಾಯಿತಿಗಳಿಗೆ ಅಗತ್ಯ ಅಭಿವೃದ್ಧಿ ಹಣ ನೀಡುತ್ತಿಲ್ಲ. ಸರ್ಕಾರ ಕೇವಲ ಪೆÇಳ್ಳು ಭರವಸೆಗಳನ್ನು ನೀಡುತ್ತಿದೆ. ಸಿಪಿಎಂ ತನ್ನ ವಿರೋಧಿಗಳನ್ನು ಎದುರಿಸಲು ಸೈಬರ್ ಗೂಂಡಾಗಳನ್ನು ಬಳಸುತ್ತಿದೆ ಎಂದು ಮುರಳೀಧರನ್ ಹೇಳಿದ್ದಾರೆ.

                  ಅಧ್ಯಕ್ಷ ಟಿ.ಇ.ಅಬ್ದುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ ಮೋಹನ ಉಣ್ಣಿತ್ತಾನ್ ಹಾಗೂ ಮುಸ್ಲಿಂ ಲೀಗ್ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಹಮಾನ್ ಕಲ್ಲಾಯಿ ಮುಖ್ಯ ಭಾಷಣ ಮಾಡಿದರು.

                ವಿಕೇಂದ್ರೀಕರಣ ಪ್ರಕ್ರಿಯೆಯಲ್ಲಿ ಯುಡಿಎಫ್ ಕೊಡುಗೆ ಕುರಿತು ಮುಸ್ಲಿಂ ಲೀಗ್ ನ ಕೋಝಿಕ್ಕೋಡ್ ಜಿಲ್ಲಾ ಉಪಾಧ್ಯಕ್ಷ ಎಸ್ಪಿ ಕುಂಞಹಮ್ಮದ್ ಮಾಸ್ತರ್ ಸಾರ್ವಜನಿಕ ಪ್ರತಿನಿಧಿಗಳಿಗೆ ತರಗತಿ ನಡೆಸಿದರು. ಮಾಜಿ ಸಚಿವ ಸಿ.ಟಿ.ಅಹ್ಮದಲಿ ಅವರನ್ನು ಕೇರಳದ ವಿಕೇಂದ್ರೀಕರಣ ಕಾಯ್ದೆಯ ಶಿಲ್ಪಿ ಎಂಬ ನೆಲೆಯಲ್ಲಿ ಸನ್ಮಾನಿಸಲಾಯಿತು. ಕಲ್ಲಟ್ರ ಮಾಹಿನ್ ಹಾಜಿ, ಡಿಸಿಸಿ ಅಧ್ಯಕ್ಷ ಪಿಕೆ ಫೈಸಲ್, ಶಾಸಕರಾದ ಎನ್.ಎ.ನೆಲ್ಲಿಕುನ್ನು, ಎ.ಕೆ.ಎಂ.ಅಶ್ರಫ್,

              ಯುಡಿಎಫ್ ಸಂಚಾಲಕ ಎ ಗೋವಿಂದನ್ ನಾಯರ್, ಜಿಲ್ಲಾ ಮುಸ್ಲಿಂ ಲೀಗ್ ಪದಾಧಿಕಾರಿಗಳಾದ ವಿ.ಕೆ.ಪಿ.ಹಮೀದಲಿ, ಎಂ.ಬಿ.ಸೂಸುಫ್, ಕೆ.ಮುಹಮ್ಮದ್ ಕುಂಞÂ್ಞ , ವಿ.ಪಿ. ಅಬ್ದುಲ್ ಖಾದರ್, ವಿ.ಕೆ.ಬಾವಾ , ಪಿ.ಎಂ.ಮುನೀರ್ ಹಾಜಿ, ಮೂಸಾ ಬಿ. ಚೆರ್ಕಳ, ಸ್ಥಳೀಯ ಘಟಕದ ಅಧ್ಯಕ್ಷ ಕೆ.ಇ.ಎ. ಬೇಕಲ್, ಎಂ.ಪಿ. ಜಾಫರ್,  ಎಂ ಅಬ್ಬಾಸ್, ಅಬ್ದುಲ್ಲಕುಂಞÂ್ಞ ಚೆರ್ಕಳ, ಎ.ಬಿಶಾಫಿ, ನ್ಯಾಯವಾದಿ. ಎಂ.ಟಿ.ಪಿ.ಕರೀಂ, ಎ.ಸಿ.ಎ. ಲತೀಫ್, ಕಾಂಗ್ರೆಸ್ ಮುಖಂಡ ಕೆ.ಮೊಯ್ತೀನ್ ಕುಟ್ಟಿ ಹಾಜಿ, ಎಂ.ಸಿ.ಖಮರುದ್ದೀನ್, ಕರುಂತಪ್ಪ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಎ.ಅಬ್ದುಲ್ ರೆಹಮಾನ್ ಸ್ವಾಗತಿಸಿ, ಕಾರ್ಯದರ್ಶಿ ಅಜೀಜ್ ಮರಿಕೆ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries