ಕಾಸರಗೋಡು: ಅಭಿವೃದ್ಧಿ ಹೆಸರಲ್ಲಿ ವ್ಯಾಪಕ ಪರಿಸರ ನಾಶ ಹಾಗೂ ಜನರಲ್ಲಿ ಭಂiÀi ಹುಟ್ಟಿಸುವ ರೀತಿಯಲ್ಲಿ ಕೆ-ರೈಲ್ ಯೋಜನೆ ಜಾರಿಗೊಳಿಸಲು ಕೇರಳ ಸರ್ಕಾರ ಶ್ರಮನಿಸುತ್ತಿರುವುದಾಗಿ ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ವಕೀಲ ಕೆ.ಪಿ ಪ್ರಕಾಶ್‍ಬಾಬು ತಿಳಿಸಿದ್ದಾರೆ.
ಅವರು ಕೇರಳದ ಎಡರಂಗ ಸರ್ಕಾರ ರಾಜ್ಯದಲ್ಲಿ ಜಾರಿಗೊಳಿಸಲು ಮುಂದಾಗಿರುವ ಕೆ-ರೈಲ್ ಯೋಜನೆ ವಿರುದ್ಧ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಹೊಸಬಸ್ ನಿಲ್ದಾಣ ವಠಾರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಉದ್ಘಾಟಿಸಿ ಮಾತನಾಡಿದರು. ಕೇರಳದ ಆರ್ಥಿಕ ಪರಿಸ್ಥಿತಿ ತುಂಬಾ ಶೋಚನೀಯಾವಸ್ಥೆಯಲ್ಲಿದ್ದು, ಈ ಸಂದರ್ಭ ಜನತೆಗೆ ಪ್ರಯೋಜನಕಾರಿಯಾದ ಯೋಜನೆಗಳನ್ನು ಜಾರಿಗೊಳಿಸುವ ಬದಲು ಅಭಿವೃದ್ಧಿ ಹೆಸರಲ್ಲಿ ಕೇರಳವನ್ನು ವಿನಾಶದ ಅಂಚಿಗೆ ತಳ್ಳಲು ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಶ್ರಮಿಸುತ್ತಿರುವುದಾಗಿ ತಿಳಿಸಿದರು. ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಪಿ.ರಮೇಶ್, ರಾಮಪ್ಪ ಮಂಜೇಶ್ವರ, ರೂಪವಾಣಿ ಆರ್.ಭಟ್, ಎಂ. ಬಲರಾಜ್, ಜನನಿ, ಉಮಾ ಕಡಪ್ಪುರ, ಪುಷ್ಪಾ ಅಮೆಕ್ಕಳ, ಎ.ಕೆ ಕಯ್ಯಾರ್, ಧನಂಜಯ ಮಧೂರ್, ಈಶ್ವರ ಮಾಸ್ಟರ್ ಮುಂತಾದವರು ಉಪಸ್ಥಿತರಿದ್ದರು.