ಕಾಸರಗೋಡು: ಆಹಾರ ಸಾಮಾಗ್ರಿಗಳ ಬೆಲೆಯೇರಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಸಪ್ಲೈ ಕೋ ಸಂಚಾರಿ ಮಾರಾಟ ಕೇಂದ್ರಗಳ ಚಟುವಟಿಕೆ ನಡೆಸಲಿದ್ದು, ಮನೆ ಬಾಗಿಲಿಗೇ ಅಗತ್ಯದ ಸಾಮಾಗ್ರಿಗಳು ತಲಪಲಿವೆ.
ನ.30ರಂದು(ಇಂದು) ಬೆಳಗ್ಗೆ 8 ಗಂಟೆಗೆ ಪಾಳಯಂ ನಲ್ಲಿ ಆಹಾರಾ ಸಚಿವ ನ್ಯಾಯವಾದಿ ಜಿ.ಅನಿಲ್ ಈ ಸಂಚಾರಿ ಮಾರಾಟ ಕೇಂದ್ರಕ್ಕೆ ಚಾಲನೆ ನೀಡುವರು. ಡಿ.9 ವರೆಗೆ ಕಾಸರಗೊಡು ಜಿಲ್ಲೆಯ ವಿವಿಧೆಡೆ ಈ ಸಂಚಾರಿ ವ್ಯವಸ್ಥೆ ಪರ್ಯಟನೆ ನಡೆಸಲಿದೆ.
ನ.30ರಂದು ಈ ಕೇಂದ್ರ ಸಂಚಾರ ನಡೆಸುವ ಜಾಗ-ಸಮಯ ಈ ಕೆಳಗೆ ನೀಡಲಾಗಿದೆ.
ಕಾಸರಗೋಡು ನಗರದ ನೆಲ್ಲಿಕುಂಜೆ (ಬೆಳಗ್ಗೆ 9.30.), ನೀರ್ಚಾಲು(10 ಗಂಟೆ), ಬೆಳಿಂಜ( ಮಧ್ಯಾಹ್ನ 12.15.), ಮುಂಡೋಳು ಜಂಕ್ಷನ್(2.30.), ಇರಿಯಣ್ಣಿ(ಸಂಜೆ 5.)
ಬಂದ್ಯೋಡು( ಬೆಳಗ್ಗೆ 8.), ಪೆರ್ಮುದೆ(10.), ಧರ್ಮತ್ತಡ್ಕ(ಮಧ್ಯಾಹ್ನ 12.15), ಬಾಯಾರು(2.30.), ಚಿಗುರುಪಾದೆ(ಸಂಜೆ 4.).
ಡಿ.1ರಂದು
ಕಾಸರಗೋಡು ಪೆÇಯಿನಾಚಿ(ಬೆಳಗ್ಗೆ 8.), ಪೆರ್ಲಡ್ಕ(9.30.), ಮುನ್ನಾಡು(ಮಧ್ಯಾಹ್ನ 12.15.), ಪಡ್ಪು(2.30.), ಬಂದಡ್ಕ(ಸಂಜೆ 4.30.).
ಮೊರತ್ತಣೆ(ಬೆಳಗ್ಗೆ 8.), ದೈಗೋಳಿ(10.), ಕುಂಜತ್ತೂರು(ಮಧ್ಯಾಹ್ನ 12.15), ಹೊಸಂಗಡಿ(ಸಂಜೆ 3.30.)