ಕಾಸರಗೋಡು: 18 ತಿಂಗಳ ಸುದೀರ್ಘ ಅವಧಿಯ ನಂತರ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಕಾಸರಗೊಡು ಜಿಲ್ಲೆಯ ಶಾಲೆಗಳು ಸಜ್ಜು ಗೊಂಡಿವೆ. ಈ ವೇಳೆ ಕೋವಿಡ್ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ತಿಳಿಸಿದರು.
ನ.1ರಂದು ಮೊದಲ ಹಂತವಾಗಿ, 15ರ ನಂತರ ದ್ವಾತೀಯ ಹಂತವಾಗಿ ಶಾಲೆಗಳು ತೆರೆಯಲಿವೆ. ಸ್ಥಳಿಯ ಕ್ಲಬ್ ಗಳು, ಸಂಘಟನೆಗಳು, ರಕ್ಷಕ-ಶಿಕ್ಷಕ ಸಂಘ ಗಳು, ಶಿಕ್ಷಕರು ಮೊದಲಾದವರ ನೇತೃತ್ವದಲ್ಲಿ ಶುಚೀಕರಣ ನಡೆದಿದೆ. ಬಹುಪಾಲು ಶಾಲೆಗಳ ಪ್ರಾಥಮಿಕ ತರಗತಿಗಳ ಗೋಡೆಗಳಲ್ಲಿ ಮಕ್ಕಳನ್ನು ಆಕರ್ಷಿಸುವ ಚಿತ್ರಗಳನ್ನು ರಚಿಸಲಾಗಿದೆ. ವಿದ್ಯಾರ್ಥಿಗಳ ಪ್ರಯಾಣ ಸಮಸ್ಯೆಗಳ ಪರಿಹಾರಕ್ಕೆ ಆದೇಶ ನೀಡಲಾಗಿದೆ. ಸಂಚಾರಿ ಪಾಸ್ ಮಂಜೂರು ಸಂಬಂಧ ಶಾಲಾ ಅಧಿಕಾರಿಗಳು, ಮೋಟಾರು ವಾಹನ ಇಲಾಖೆಗೆ ಆದೇಶ ನೀಡಲಾಗುವುದು ಜಿಲ್ಲಾಧಿಕಾರಿ ತಿಳಿಸಿದರು.