ಬದಿಯಡ್ಕ: ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರ ಬದಿಯಡ್ಕ ಪ್ರಾದೇಶಿಕ ಸಮಿತಿಯ ಮಹಾಸಭೆ ಇಲ್ಲಿನ ಗಣೇಶ ಮಂದಿರದಲ್ಲಿ ಜರಗಿತು.
ಸಭೆಯಲ್ಲಿ ಬದಿಯಡ್ಕ ಪ್ರಾದೇಶಿಕ ಸಮಿತಿ ಅಧ್ಯಕ್ಷ ನಾರಾಯಣ ಸರಳಿಮೂಲೆ ಅಧ್ಯಕ್ಷತೆ ವಹಿಸಿದರು. ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರ ಆಡಳಿತ ಸಮಿತಿಯ ಅಧ್ಯಕ್ಷ ವಸಂತ ಚೇಂಬೋಡು, ನವೀಕರಣ ಸಮಿತಿ ಅಧ್ಯಕ್ಷ ರಾಮ ಮಾಸ್ತರ್ ಇಕ್ಕೇರಿ, ಅಪ್ಪಕುಞ ಬೆಳ್ಚಪ್ಪಾಡ, ಉಪದೇಶಕ ಚಿರಿಯಂಡ ಬಡಕಾಜೆ, ಇತರ ಪದಾಧಿಕಾರಿಗಳಾದ ಡಾಕ್ಟರ್ ಶ್ರೀಧರ ಮಾಸ್ತರ್, ಸುಧಾಕರ ಚೇಂಬೋಡು, ಪ್ರಸಾದ ಕಡುಂಬು, ನ್ಯಾಯವಾದಿ ಅಕ್ಷತಾ ಇಕ್ಕೇರಿ, ರಾಜೇಶ್ ಪೊಡಿಪ್ಪಳ್ಳ, ರವಿ ನವಶಕ್ತಿ, ಜನಾರ್ಧನ ಭಂಡಾರ ಮನೆ, ಜನಾರ್ಧನ ಪೂಜಾರಿಮೂಲೆ, ಪುರುಷೋತ್ತಮ ಕೋಳಾರಿ, ಪ್ರಾದೇಶಿಕ ಸಮಿತಿ ಪದಾಧಿಕಾರಿಗಳಾದ ಅಶೋಕನ್ ಬಾರಡ್ಕ, ರಾಮಕೃಷ್ಣ ಕಾಯರ್ಕಯ, ಸುಧಾಕರನ್ ಮೊದಲಾದವರು ಭಾಗವಹಿಸಿದರು.