HEALTH TIPS

ಕಲ್ಲಿದ್ದಲು ದಹನ ಕಾರಣದಿಂದ ದೇಶದಲ್ಲಿ ಅಕಾಲಿಕ ಮರಣ ಪ್ರಮಾಣದಲ್ಲಿ ಹೆಚ್ಚಳ: ವರದಿ

              ನವದೆಹಲಿ: ಆರೋಗ್ಯ ಮತ್ತು ಹವಾಮಾನ ಬದಲಾವಣೆಯ ಲ್ಯಾನ್ಸೆಟ್ ಕೌಂಟ್ ಡೌನ್ ವರದಿಯಲ್ಲಿನ  ಶಿಫಾರಸುಗಳ ಪ್ರಕಾರ, ಪ್ರಮುಖವಾಗಿ ವಿದ್ಯುತ್ ಸ್ಥಾವರುಗಳು, ಕೈಗಾರಿಕೆಗಳು ಮತ್ತು ಮನೆಗಳಲ್ಲಿನ ಕಲ್ಲಿದ್ದಲು ದಹನ ದೇಶದಲ್ಲಿ ಅಕಾಲಿಕ  ಮರಣ ದರ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಇಂಧನದ ಮುಖ್ಯ ಶಕ್ತಿಯಾಗಿರುವ ಕಲ್ಲಿದ್ದಲನ್ನು ಹಂತ ಹಂತವಾಗಿ ಕಡಿಮೆ ಮಾಡಬೇಕಾಗಿದ್ದು, ನವೀಕರಿಸಬಹುದಾದ ಮತ್ತು ಶುದ್ಧ ಮೂಲಗಳ ಮೇಲೆ ಹೆಚ್ಚು ಹೂಡಿಕೆ ಮಾಡಬೇಕಾಗಿದೆ 

               ಅಲ್ಲದೆ, ದೇಶದಲ್ಲಿ ಋಣಾತ್ಮಕ ಆರೋಗ್ಯ ಫಲಿತಾಂಶಗಳಿಗೆ ವಾಯು ಮಾಲಿನ್ಯ ಪ್ರಮುಖ ನಿರ್ಣಾಯಕ ಎಂಬುದಾಗಿ ಗುರುತಿಸಲ್ಪಟ್ಟಿದೆ . ಆದ್ದರಿಂದ ಅದರ ಉತ್ಪಾದನೆಯ ಮೂಲಗಳಾಗಿರುವ ಕೈಗಾರಿಕೆಗಳು, ಕಟ್ಟಡ ನಿರ್ಮಾಣ ಸ್ಥಳಗಳು ಮತ್ತಿತರ ಕಡೆಗಳಲ್ಲಿ  ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಂತ್ರಕ ಚೌಕಟ್ಟುಗಳನ್ನು ಸ್ಥಾಪಿಸುವ ತುರ್ತು ಅವಶ್ಯಕತೆಯಿದೆ ಎಂದು ಆರೋಗ್ಯ ಮತ್ತು ಹವಾಮಾನ ಬದಲಾವಣೆಯ ಲ್ಯಾನ್ಸೆಟ್ ಕೌಂಟ್ ಡೌನ್ ವರದಿಯಲ್ಲಿ ತಿಳಿಸಲಾಗಿದೆ. 

                ಈ ನಿಯಂತ್ರಕ ಕ್ರಮಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವುದು ಸಹ ಅಗತ್ಯವಾಗಿದೆ.
                  ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಐಸಿಎಂಆರ್ ಆರೋಗ್ಯ ಮತ್ತು ಹವಾಮಾನ ಬದಲಾವಣೆಯ ಲ್ಯಾನ್ಸೆಟ್ ಕೌಂಟ್‌ಡೌನ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಹವಾಮಾನ ಬದಲಾವಣೆಯು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಅದನ್ನು ಪರಿಹರಿಸಲು ಸಮಯೋಚಿತ ಮತ್ತು ದೃಢವಾದ ಪ್ರತಿಕ್ರಿಯೆಯ ಅಗತ್ಯವನ್ನು ವರದಿಯು ಎತ್ತಿ ತೋರಿಸುತ್ತದೆ ಎಂದು ಆರೋಗ್ಯ ಸಂಶೋಧನಾ ಮಂಡಳಿ ಅಂಗಸಂಸ್ಥೆ ತಿಳಿಸಿದೆ.

               2021 ರ ಜಾಗತಿಕ ಲ್ಯಾನ್ಸೆಟ್ ಕೌಂಟ್‌ಡೌನ್ ವರದಿಯ ಡೇಟಾದಂತೆ  2015 ಕ್ಕೆ ಹೋಲಿಸಿದರೆ 2019 ರಲ್ಲಿ ಭಾರತದಲ್ಲಿ ಕಲ್ಲಿದ್ದಲು ಮೂಲದ PM2.5 ಗೆ ಸಂಬಂಧಿಸಿದ ಸಾವಿನ ಸಂಖ್ಯೆಯಲ್ಲಿ ಶೇಕಡಾ ಒಂಬತ್ತು  ರಷ್ಟು ಹೆಚ್ಚಳವಾಗಿದೆ. 
               ಅಂತರರಾಷ್ಟ್ರೀಯ ಆರೋಗ್ಯ ನಿಯಂತ್ರಣ ಅಡಿಯಲ್ಲಿ ರಾಷ್ಟ್ರೀಯ ಆರೋಗ್ಯ ತುರ್ತು ಚೌಕಟ್ಟಿನ ಅನುಷ್ಠಾನವನ್ನು ಸಾಧಿಸುವಲ್ಲಿ ದೇಶವು ಉತ್ತಮ ಪ್ರಗತಿಯನ್ನು ತೋರಿಸಿದೆ. ಆದಾಗ್ಯೂ, ಇದು ಇನ್ನೂ ಮೂಲಸೌಕರ್ಯ, ಮಾನವ ಸಂಪನ್ಮೂಲಗಳು ಮತ್ತು ಪರೀಕ್ಷೆ ಮತ್ತು ಕಣ್ಗಾವಲು ವ್ಯವಸ್ಥೆಗಳಂತಹ ಸಂಬಂಧಿತ ಆರೋಗ್ಯ ವ್ಯವಸ್ಥೆಗಳ ಸಾಮರ್ಥ್ಯಗಳಲ್ಲಿ ಹೂಡಿಕೆ ಮಾಡಬೇಕಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries