ಪುದುಚೆರಿ: ದ್ವಿಚಕ್ರ ವಾಹನದಲ್ಲಿ ಕೊಂಡೊಯ್ಯುತ್ತಿದ್ದ ಪಟಾಕಿ ಸ್ಫೋಟಗೊಂಡ ಪರಿಣಾಮ 7 ವರ್ಷದ ಬಾಲಕ ಹಾಗೂ ಆತನ ತಂದೆ ಮೃತಪಟ್ಟಿರುವ ಘಟನೆ ಪುದುಚೆರಿಯಲ್ಲಿ ವರದಿಯಾಗಿದೆ.
ಅರಿಯನ್ ಕುಪ್ಪಂ ಟೌನ್ ನ ನಿವಾಸಿ ಕಲೈನೇಸನ್ (32) ತನ್ನ 7 ವರ್ಷದ ಪುತ್ರನೊಂದಿಗೆ ಎರಡು ಚೀಲದಲ್ಲಿ ಪಟಾಕಿ ಹೊತ್ತು ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು, ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಕೊಟ್ಟಕುಪ್ಪಮ್ ಬಳಿ ಬಂದಾಗ ಪಟಾಕಿ ಸ್ಫೋಟಗೊಂಡು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಇನ್ನೂ ಇಬ್ಬರಿಗೆ ಗಾಯಗಳಾಗಿದ್ದು, ಜೆಐಪಿಎಂಇಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಿಂದ ಸ್ಥಳದಲ್ಲಿ ವಾಹನ ಸಂಚಾರ 2 ಗಂಟೆಗಳ ಕಾಲ ಅಸ್ತವ್ಯಸ್ತಗೊಂಡಿತ್ತು. ಪ್ರಕರಣ ದಾಖಲಿಸಿಕೊಂಡಿರಿವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.