ಕೋಝಿಕ್ಕೋಡ್: ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ನಿರ್ಭೀತಿಯಿಂದ ಪ್ರವೇಶ ಕಲ್ಪಿಸಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಪಿ.ಸತಿದೇವಿ ಹೇಳಿರುವರು. ಲಿಂಗ ಸಮಾನತೆ ಕುರಿತು ತರಬೇತಿ ನೀಡಲು ಪೊಲೀಸರಿಗೆ ಸೂಚಿಸಲಾಗಿದೆ ಎಂದವರು ತಿಳಿಸಿದರು.
ಎಲ್ಲ ಠಾಣೆಗಳನ್ನು ಜನಮೈತ್ರಿ ಠಾಣೆಗಳನ್ನಾಗಿ ಪರಿವರ್ತಿಸಲು ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಯವರನ್ನು ಕೋರಿರುವುದಾಗಿ ಸತಿದೇವಿ ತಿಳಿಸಿದರು.