ನವದೆಹಲಿ: ಗೂಗಲ್ ಬಳಕೆದಾರರು ತಮ್ಮ ಖಾತೆಗೆ ಲಾಗಿನ್ ಆಗಬೇಕಾದರೆ ಇನ್ನು ಎರಡು ಸ್ತರದ ಪರಿಶೀಲನೆ ಪ್ರಕ್ರಿಯೆಗೆ ಒಳಗಾಗಬೇಕು. ಇದುವರೆಗೆ ಐಚ್ಛಿಕವಾಗಿದ್ದ ಈ ಪ್ರಕ್ರಿಯೆ ಎಲ್ಲರಿಗೂ ಅನ್ವಯವಾಗುವಂತೆ ಇಂದಿನಿಂದ ಚಾಲ್ತಿಗೆ ಬರಲಿದೆ ಎಂದು ಕಂಪನಿ ತಿಳಿಸಿದೆ.

ಈ ಬದಲಾವಣೆಯು ಎಲ್ಲರ ಖಾತೆಗೂ ಹೆಚ್ಚುವರಿ ರಕ್ಷಣೆಯ ಪದರವನ್ನು ಒದಗಿಸುತ್ತದೆ. ಈ ವರ್ಷ ಕೊನೆಗೆ ಹೆಚ್ಚುವರಿಯಾಗಿ 15 ಕೋಟಿ ಬಳಕೆದಾರರು ಆಟೋ-ಎನ್ರೋಲ್ ಆಗುವುದಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ. ಇದೇ ರೀತಿ 20 ಲಕ್ಷ ಯೂಟ್ಯೂಬ್ ಕ್ರಿಯೇಟರ್ಗಳಿಗೂ ಇದೇ ರೀತಿ ಅವಕಾಶ ಮಾಡಿಕೊಡಲಾಗುತ್ತಿದೆ. ಈ ಆಯ್ಕೆಯನ್ನು ಚಾಲನೆಗೊಳಿಸಿದರೆ, ಗೂಗಲ್ ಖಾತೆಗೆ ಲಾಗಿನ್ ಆಗಲು ಪಾಸ್ವರ್ಡ್ ಹಾಕಿದ ಕೂಡಲೇ ಬಳಕೆದಾರರ ಮೊಬೈಲ್ಗೆ ಒಂದು ಎಸ್ಎಂಎಸ್ ರವಾನೆಯಾಗುತ್ತದೆ. ಅದರಲ್ಲಿ ಇರುವ ಒಟಿಪಿಯನ್ನು ಗೂಗಲ್ ಖಾತೆ ಲಾಗಿನ್ಗೆ ಬಳಸಬೇಕು. ಇದು ಪ್ರತಿ ಸಲ ಲಾಗಿನ್ ಆಗುವಾಗಲೂ ಅನ್ವಯವಾಗುತ್ತಿದ್ದು, ಪ್ರತಿ ಸಲವೂ ಒಟಿಪಿ ನಮೂದಿಸಬೇಕು ಎಂದು ಗೂಗಲ್ ಅಧಿಕೃತ ಬ್ಲಾಗ್ ಪೋಸ್ಟ್ನಲ್ಲಿ ತಿಳಿಸಿದೆ.