ಬದಿಯಡ್ಕ: ಕಿಳಿಂಗಾರು ಎ.ಎಲ್.ಪಿ ಶಾಲಾ ಪ್ರವೇಶೋತ್ಸವ ವಿಜೃಂಭಣೆಯಿಂದ ಜರಗಿತು. ಕಳೆದ ಒಂದೂವರೆ ವರುಷಗಳ ಬಳಿಕ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಾಲಾ ವ್ಯವಸ್ಥಾಪರೂ , ಬದಿಯಡ್ಕ ಪಂಚಾಯತಿ ಸದಸ್ಯರೂ ಆದ ಕೆ.ಎನ್ ಕೃಷ್ಣ ಭಟ್ ಸ್ವಾಗತಿಸಿದರು. ವಾರ್ಡ್ ಸದಸ್ಯೆ ಜಯಶ್ರೀ , ಪಿ.ಟಿ.ಎ ಅಧ್ಯಕ್ಷ ಪದ್ಮನಾಭ ರೈ, ಮುಖ್ಯೋಪಾಧ್ಯಾಯಿನಿ ಶ್ರೀವಿದ್ಯಾ, ಮಧುಮತಿ ಕಂಬಾರ್, ಪ್ರದೀಪ್ ಕುಮಾರ್, ಸಹನಾ, ಸುನೀತ , ಅಂಗನವಾಡಿ ಕಾರ್ಯಕರ್ತೆಯರಾದ ಉಷಾ, ಶಾಲಿನಿ ಉಪಸ್ಥಿತರಿದ್ದರು.