ಕುಂಬಳೆ: ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಅಂಗವಾಗಿ ಕುಂಬಳೆ ಸಮುದಾಯ ಆರೋಗ್ಯ ಕೇಂದ್ರ(ಸಿ.ಎಚ್.ಸಿ) ಆಶ್ರಯದಲ್ಲಿ ಚರ್ಮ ರೋಗ ವೈದ್ಯಕೀಯ ಶಿಬಿರ ಕುಂಬಳೆ ಕುಂಟಂಗೇರಡ್ಕ ಕಾಲೋನಿಯಲ್ಲಿ ಆಯೋಜಿಸಲಾಗಿತ್ತು. ಕುಂಬಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಾಹಿರಾ ಯೂಸುಫ್ ಉದ್ಘಾಟಿಸಿದರು. ಕಾಸರಗೋಡು ಬ್ಲಾಕ್ ಪಂಚಾಯತಿ ಆರೋಗ್ಯ ಸಮಿತಿ ಅಧ್ಯಕ್ಷೆ ಸಕೀನಾ ಅಬ್ದುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯಿತಿ ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಬ್ಲಾಕ್ ಪಂಚಾಯಿತಿ ಸದಸ್ಯೆ ಪ್ರೇಮ ಶೆಟ್ಟಿ, ಗ್ರಾಮ ಪಂಚಾಯಿತಿ ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಕೊಗ್ಗು, ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಆರೋಗ್ಯ ನಿರೀಕ್ಷಕ ಗನ್ನಿಮೋಳ್, ಬಾಲಚಂದ್ರನ್, ಆದರ್ಶ್, ಶಾರದಾ ಎಸ್ ಮಾತನಾಡಿದರು. ಚರ್ಮರೋಗ ತಜ್ಞೆ ಡಾ.ಸಾವಿತ್ರಿ ರೋಗಿಗಳ ತಪಾಸಣೆ ನಡೆಸಿದರು.
ಸರ್ವೆ: ಪಂಚಾಯಿತಿಯಲ್ಲಿ ಕುಷ್ಠರೋಗ ಪತ್ತೆಗಾಗಿ ಅಶ್ವಮೇಧಂ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಮೀಕ್ಷೆಯ ಭಾಗವಾಗಿ, ಪುರುಷ ಮತ್ತು ಮಹಿಳಾ ಸ್ವಯಂಸೇವಕರು ಮನೆಗಳಿಗೆ ಭೇಟಿ ನೀಡಿ ಜನರನ್ನು ಪರಿಶೀಲಿಸುತ್ತಾರೆ. ಫೆಬ್ರವರಿಯಲ್ಲಿ ಸಮೀಕ್ಷೆ ಪೂರ್ಣಗೊಳ್ಳಲಿದೆ.