HEALTH TIPS

ಗಡಿ ನಿರ್ವಹಣೆಯಲ್ಲಿ ಪೊಲೀಸರ ಪಾತ್ರ ಮಹತ್ವದ್ದು: ಅಜಿತ್ ದೋಭಾಲ್

              ಹೈದರಾಬಾದ್: 'ಕಾನೂನು ಮತ್ತು ಸುವ್ಯವಸ್ಥೆ ರಕ್ಷಣೆಯ ಜೊತೆಗೆ ಪಾಕಿಸ್ತಾನ, ಚೀನಾ ಮತ್ತು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಜೊತೆಗಿನ 15,000 ಕಿಮೀ ಗಡಿಭಾಗದ ನಿರ್ವಹಣೆಯಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ' ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋಭಾಲ್‌ ಹೇಳಿದ್ದಾರೆ.

              ಇಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಶುಕ್ರವಾರ 73ನೇ ಐಪಿಎಸ್‌ ಪ್ರೊಬೇಷನರಿ ಅಧಿಕಾರಿಗಳ ತಂಡದ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 'ಭಾರತದ ಸಾರ್ವಭೌಮತ್ವವು ಕರಾವಳಿ ಪ್ರದೇಶಗಳಿಂದ ಗಡಿ ಪ್ರದೇಶದಲ್ಲಿನ ಕೊನೆಯ ಪೊಲೀಸ್ ಠಾಣೆ ಸರಹದ್ದಿನವರೆಗೂ ವ್ಯಾಪಿಸಿದೆ' ಎಂದರು.

             ಭಾರತದ 32 ಲಕ್ಷ ಚ.ಕಿ.ಮೀ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ರಕ್ಷಣೆ ಪೊಲೀಸ್ ಪಡೆಗಳ ಹೊಣೆಗಾರಿಕೆ. ನಿಮಗೆ ನೀಡಿದ ತರಬೇತಿಯ ಉದ್ದೇಶ ಪೊಲೀಸ್ ಕೆಲಸವಷ್ಟೇ ಅಲ್ಲ, ಅದನ್ನೂ ಮೀರಿದ್ದಾಗಿದೆ' ಎಂದು ಹೇಳಿದರು.

           'ದೇಶದ ಗಡಿ ನಿರ್ವಹಣೆಯ ಜವಾಬ್ದಾರಿಯೂ ನಿಮ್ಮ ಮೇಲಿದೆ. ಸುಮಾರು 15 ಸಾವಿರ ಕಿ.ಮೀ. ದೂರದ ಗಡಿ ಭಾಗದಲ್ಲಿ ವಿಭಿನ್ನವಾದ ಸಮಸ್ಯೆಗಳು ಇವೆ' ಎಂದು ಅವರು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು.

              'ಪಾಕಿಸ್ತಾನ, ಚೀನಾ ಅಥವಾ ಮ್ಯಾನ್ಮಾರ್ ಅಥವಾ ಬಾಂಗ್ಲಾದೇಶದ ಜೊತೆಗೆ ದೇಶದ ಗಡಿ ಇದೆ. ಭದ್ರತೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳಿವೆ. ಸದ್ಯ, ಪೊಲೀಸರು ಮತ್ತು ಕೇಂದ್ರ ಪೊಲೀಸ್ ಇಲಾಖೆಗಳು ನಿರ್ವಹಿಸುತ್ತಿವೆ' ಎಂದು ದೋಭಾಲ್‌ ಹೇಳಿದರು.

              ದೋಭಾಲ್ ಪ್ರಕಾರ ದೇಶದಲ್ಲಿ 21 ಲಕ್ಷ ಪೊಲೀಸ್ ಸಿಬ್ಬಂದಿ ಇದ್ದು, ಇದೂವರೆಗೆ 35,480 ಮಂದಿ ಕರ್ತವ್ಯದ ವೇಳೆ ಪ್ರಾಣತ್ಯಾಗ ಮಾಡಿದ್ದಾರೆ. ಹುತಾತ್ಮರಾದ 40 ಐಪಿಎಸ್‌ ಅಧಿಕಾರಿಗಳನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕಿದೆ' ಎಂದೂ ಅವರು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries