ಕಾಸರಗೋಡು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಸಿದ್ದರೂ, ಕೇರಳದಲ್ಲಿ ತೆರಿಗೆ ಕಡಿತಗೊಳಿಸದಿರುವ ಕ್ರಮ ಖಂಡಿಸಿ ನ. 8ರಂದು ರಾಜ್ಯಾದ್ಯಂತ ಚಕ್ರ ಸ್ತಂಬನ ಚಳವಳಿ ಹಮ್ಮಿಕೊಳ್ಳಲು ಕೆಪಿಸಿಸಿ ತೀರ್ಮಾನಿಸಿದೆ.
ನಾಳೆ ಬೆಳಗ್ಗೆ 11ರಿಂದ 11.15ರ ವರೆಗೆ ಹದಿನೈದು ನಿಮಿಷಗಳ ಕಾಲ ವಾಹನ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟಿಸಲಾಗುವುದು. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ತೆರಿಗೆ ಕಡಿತಗೊಳಿಸಲು ಈಗಾಗಲೇ ಎಐಸಿಸಿ ನಿರ್ದೇಶ ನೀಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಪ್ರತಿ ಲೀ. ಡೀಸೆಲ್‍ಗೆ 10ರೂ. ಹಾಗೂ ಪೆಟ್ರೋಲ್‍ಗೆ 5ರೂ ಕಡಿತಗೊಳಿಸಿದ್ದರೂ, ಕೇರಳ ಸರ್ಕಾರ ತೆರಿಗೆ ಇಳಿಸಲು ನಿರಾಕರಿಸಿರುವುದನ್ನು ಪ್ರತಿಭಟಿಸಿ ಕೆಪಿಸಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಿದೆ.