ಪ್ಯಾರಿಸ್: ಫುಟ್ ಬಾಲ್ ನ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ 7 ನೇ ಬಾರಿಗೆ ಬ್ಯಾಲನ್ ಡಿ'ಓರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ದಾಖಲೆ ನಿರ್ಮಿಸಿದ್ದಾರೆ.
ವಿಶ್ವದ ಅತ್ಯುತ್ತಮ ಆಟಗಾರ ವಿಭಾಗದಲ್ಲಿ ಮೆಸ್ಸಿಗೆ ಬ್ಯಾಲನ್ ಡಿ'ಓರ್ ಪ್ರಶಸ್ತಿ ಲಭ್ಯವಾಗಿದೆ. ಫ್ರಾನ್ಸ್ ನ ಫುಟ್ಬಾಲ್ ನಿಯತಕಾಲಿಕೆ ಬ್ಯಾಲನ್ ಡಿ'ಓರ್ ಪ್ರಶಸ್ತಿಯನ್ನು ನೀಡುತ್ತಿದ್ದು, ಮೆಸ್ಸಿ 2009 ರಿಂದ 2012 ವರೆಗೆ ಸತತವಾಗಿ ಪ್ರಶಸ್ತಿಯನ್ನು ಗಳಿಸಿದ್ದರು ನಂತರ 2015 ಮತ್ತು 2019 ರಲ್ಲಿ ಹಾಗೂ ಈಗ ಮೆಸ್ಸಿಗೆ ಪುನಃ ಈ ಪ್ರಶಸ್ತಿ ಒಲಿದಿದೆ.
ಎರಡು ವರ್ಷಗಳ ಹಿಂದೆ ಗೆದ್ದಿದ್ದ ಪ್ರಶಸ್ತಿಯೇ ಕೊನೆಯದಾಗಿರಲಿದೆ ಎಂದುಕೊಂಡಿದ್ದೆ. ಆದರೆ ಈ ಬಾರಿ ಪುನಃ ಪ್ರಶಸ್ತಿ ಗೆದ್ದಿರುವುದನ್ನು ಕೇಳಿ ಸಂತಸವಾಗುತ್ತಿದೆ ಎಂದು ಮೆಸ್ಸಿ ಪ್ರತಿಕ್ರಿಯೆ ನೀಡಿದ್ದಾರೆ.
ಬಾರ್ಸಿಲೋನಾ ಹಾಗೂ ಸ್ಪೇನ್ ವಿರುದ್ಧ ಅತ್ಯುತ್ತಮ ಆಟ ಆಡಿದ ಮಹಿಳಾ ಫುಟ್ಬಾಲ್ ಆಟಗಾರ್ತಿ ಅಲೆಕ್ಸಿಯಾ ಪುಟೆಲ್ಲಾಸ್ ಅವರಿಗೂ ಬ್ಯಾಲನ್ ಡಿ'ಓರ್ ಪ್ರಶಸ್ತಿ ಲಭ್ಯವಾಗಿದ್ದು, ಈ ಪ್ರಶಸ್ತಿ ಪಡೆದ ಮೂರನೇ ಮಹಿಳೆಯಾಗಿದ್ದಾರೆ.