ಲಂಡನ್: ಬ್ರಿಟಿಷರ ಕಾಲದ ಭಾರತದ ಕೊನೆಯ ವೈಸ್ ರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಗೆ ಸೇರಿದ ಖಾಸಗಿ ಡೈರಿ ಹಾಗೂ ಪತ್ರಗಳನ್ನು ಸಾರ್ವಜನಿಕರಿಗಾಗಿ ಬಿಡುಗಡೆಗೊಳಿಸಬೇಕೋ ಬೇಡವೋ ಎಂಬುದರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ವಾರವೇ ಈ ಬಗ್ಗೆ ತೀರ್ಪು ಹೊರಬೀಳಲಿದೆ.
ಮೌಂಟ್ ಬ್ಯಾಟನ್ ಅವರ ಪತ್ರಗಳು 1930ರ ಸಮಯದಲ್ಲಿ ಬರೆದವಾಗಿವೆ. ಬ್ರಿಟಿಷ್- ಭಾರತದ ಇತಿಹಾಸದ ಕುರಿತು ಈ ಪತ್ರಗಳು ಬೆಳಕು ಚೆಲ್ಲಲಿವೆ ಎಂದು ಪರಿಣತರು, ಇತಿಹಾಸಹಾರರು ಅಭಿಪ್ರಾಯಪಟ್ಟಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಭಾರತ ಪಾಕಿಸ್ತಾನ ವಿಭಜನೆಯ ಕುರಿತಾಗಿ ಮೌಂಟ್ ಬ್ಯಾಟನ್ ಪತ್ರಗಳಲ್ಲಿ ಹೊಸ ವಿಚಾರಗಳು ಹೊರಬೀಳಲಿರುವ ಸಾಧ್ಯತೆಯೂ ಇದೆ. ಇವೆಲ್ಲಾ ಕಾರಣಗಳಿಂದ ಇದೇ ಶುಕ್ರವಾರ ನಡೆಯಲಿರುವ ನ್ಯಾಯಾಲಯ ವಿಚಾರಣೆ ಪ್ರಮುಖ ಪಾತ್ರ ವಹಿಸಿದೆ.