ಮಂಜೇಶ್ವರ: ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿಯೇಶನ್ ಕೇರಳ(ಸವಾಕ್) ಮಂಜೇಶ್ವರ ವಲಯದ ಸಮಾವೇಶ ಭಾನುವಾರ ಮಂಜೇಶ್ವರ ಕಲಾಸ್ಪರ್ಶಂ ಅಡಿಟೋರಿಯಂನಲ್ಲಿ ನಡೆಯಿತು.
ಸವಾಕ್ ಮಂಜೇಶ್ವರ ವಲಯ ಅಧ್ಯಕ್ಷೆಯೂ ಮಂಜೇಶ್ವರ ಗ್ರಾ.ಪಂ.ಅ|ಧ್ಯಕ್ಷೆಯೂ ಆದ ಜೀನ್ ಲವೀನಾ ಮೊಂತೇರೊ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಮಂಜೇಶ್ವರ ಶಾಸಕ ಎ. ಕೆ. ಯಂ. ಅಶ್ರಫ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸವಾಕ್ ಜಿಲ್ಲಾಧ್ಯಕ್ಷ ಉಮೇಶ್ ಎಂ. ಸಾಲಿಯಾನ್ ಹಾಗೂ ಜಯಾನಂದ ಮಂಜೇಶ್ವರ ಪಾಲ್ಗೊಂಡರು. ಹಿರಿಯ ಕಲಾವಿದ ನೇರೋಳು ಗಣಪತಿ ನಾಯಕ್, ಚನಿಯ ಹೇರೂರು, ಕೆ. ಪಿ. ನಾರಾಯಣ ಪಟ್ಲ, ಸೀತಾ ಪೊಸೋಟ್, ನಾರಾಯಣ ಸಜಂಕಿಲ ಮುಂತಾದವರನ್ನು ಸನ್ಮಾನಿಸಲಾಯಿತು. ಚಂದ್ರಹಾಸ ಕಯ್ಯಾರು ಸ್ವಾಗತಿಸಿ, ಸುಜಾತ ಮಂಜೇಶ್ವರ ವಂದಿಸಿದರು.
ನೂತನ ಪದಾಧಿಕಾರಿಗಳಾಗಿ ಜೀನ್ ಲವೀನಾ ಮೊಂತೇರೊ (ಅಧ್ಯಕ್ಷರು), ದಾಮೋದರ ಬೇಕೂರ್ (ಪ್ರಧಾನ ಕಾರ್ಯದರ್ಶಿ), ನೂತನ್ ಪಚ್ಚಂಬಳ (ಕೋಶಾಧಿಕಾರಿ), ಉಪಾಧ್ಯಕ್ಷರುಗಳಾಗಿ, ಶುಭಾನಂದ ಶೆಟ್ಟಿ ಕುಳೂರು,ಸುಜಾತ ಮಂಜೇಶ್ವರ, ಜೊತೆ ಕಾರ್ಯದರ್ಶಿಯಾಗಿ ಜಯಶ್ರೀ ಮೊಂತೇರೊ, ರಮೇಶ್ ಕುರೆಡ್ಕ ಆಯ್ಕೆಯಾದರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸವಾಕ್ ಮಹಿಳಾ ಸದಸ್ಯರಿಂದ ಜಾಬಾಲಿ ನಂದಿನಿ ಎಂಬ ಯಕ್ಷಗಾನ ತಾಳಮದ್ದಳೆ, ರಮೇಶ್ ಪೆರ್ಲ ಬಳಗದವರಿಂದ ಭಕ್ತಿ ರಸಮಂಜರಿ, ದಿವಾಣ ಶಿವಶಂಕರ ಭಟ್ ಇವರ ನೇತೃತ್ವದಲ್ಲಿ ಜಾಂಬವತಿ ಕಲ್ಯಾಣ ಯಕ್ಷಗಾನ ಬಯಲಾಟ ಜರಗಿತು.