ಬದಿಯಡ್ಕ: ನಾಡಿನ ಜನತೆಯ ಮನದಲ್ಲಿ ಸದಾ ನೆಲೆನಿಲ್ಲುವಂತಹ ಉತ್ತಮ ಕೆಲಸಗಳನ್ನು ಮಾಡುವುದರಿಂದ ಆ ವ್ಯಕ್ತಿಯು ಶ್ರೇಷ್ಠನಾಗುತ್ತಾನೆ. ಅಂತಹ ಶ್ರೇಷ್ಠರ ಪಾಲಿಗೆ ಸೇರಿದ ನಮ್ಮ ಡಾ.ವೈ.ಕೆ.ಕೇಶವ ಭಟ್ಟರು ಏತಡ್ಕವೆಂಬ ಕುಗ್ರಾಮದ ಸಮಗ್ರ ಅಭಿವೃದ್ಧಿಯಲ್ಲಿ ಪ್ರಧಾನಪಾತ್ರವಹಿಸಿದ್ದರು ಎಂದು ಅವರ ಒಡನಾಡಿ ನಿವೃತ್ತ ಅಧ್ಯಾಪಕ ಡಿ.ನಾರಾಯಣ ಭಟ್ ಹೇಳಿದರು.
ಕುಂಬ್ಡಾಜೆ ಗ್ರಾಮಸೇವಾಸಂಘ ಗ್ರಂಥಾಲಯ ಏತಡ್ಕ ಇದರ ಆಶ್ರಯದಲ್ಲಿ ಇತ್ತೀಚೆಗೆ ಜರಗಿದ ಡಾ.ವೈ.ಕೆ.ಕೇಶವ ಭಟ್ಟರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಶ್ರೀಯುತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು.
ವೈ ಎಸ್ ಕೇಶವ ಶರ್ಮ, ಶಂಕರನಾರಾಯಣ ಭಟ್ ತಮ್ಮ ಮನದಾಳದ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಪ್ರತಿಭಾನ್ವಿತರಾದ ದೀಪ್ತಿ ಕೆ.ಎಸ್, ಅನುಷಾ, ತನುಷಾ ಭಾವಗೀತೆ ಹಾಗೂ ಕಾರ್ತಿಕ್ ಕುಮಾರ್ ಕೆ. ಕಡೆಕಲ್ಲು ಅವರಿಂದ ಕೊಳವಾದನವೂ ನಡೆಯಿತು. ಪ್ರಭಾರ ಗ್ರಂಥಾಲಯ ಪಾಲಕಿ ಶಾಂತಕುಮಾರಿ.ಕೆ, ಲೀಲಾ ಪೈಸಾರಿಮೂಲೆ, ಕೆ.ನರಸಿಂಹ ಭಟ್, ಉದಯಶಂಕರ ಭಟ್, ಸಿ ಎಚ್ ಗೋಪಾಲಕೃಷ್ಣ ಭಟ್, ವೈ. ಅಬ್ದುಲ್ ರಹಿಮಾನ್ ಹಾಜಿ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಪುಷ್ಪಾರ್ಚನೆಗೈದರು. ವೈ ಕೆ ಗಣಪತಿ ಭಟ್ ಸ್ವಾಗತಿಸಿ, ಡಾ ವೇಣುಗೋಪಾಲ್ ಕೆ ವಂದಿಸಿದರು. ಸುಬ್ರಹ್ಮಣ್ಯ ಭಟ್ ಕೆ ಕಾರ್ಯಕ್ರಮ ನಿರೂಪಿಸಿದರು.