ಪತ್ತನಂತಿಟ್ಟ: ಶಬರಿಮಲೆಗೆ ಪಾರಂಪರಿಕ ಧಾರ್ಮಿಕ ವಿಧಿವಿಧಾನಗಳನ್ನು ಉಲ್ಲಂಘಿಸಿ ಸ್ತ್ರೀಯರು ಮತ್ತೆ ಪ್ರವೇಶಿಸಲಿದ್ದಾರೆ ಎಂಬ ರಹಸ್ಯ ವರದಿಗಳು ಬಂದಿವೆ ಎಂದು ಭಕ್ತರು ಹೇಳಿದ್ದಾರೆ. ಇದರ ಬೆನ್ನಲ್ಲೇ ಭಕ್ತರು ಸೋಮವಾರ ಮಧ್ಯರಾತ್ರಿ ಚೆಂಗನ್ನೂರಿನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ತಡೆದರು. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಇಬ್ಬರು ಯುವತಿಯರು ಆಗಮಿಸಿದ್ದರು. ಆದರೆ ಭಕ್ತರ ವಿರೋಧದಿಂದ ಅವರನ್ನು ವಾಪಸ್ ಕಳುಹಿಸಲಾಗಿದೆ. ಇಂತಹ ವರದಿಗಳ ಹಿನ್ನೆಲೆಯಲ್ಲಿ ಭಕ್ತರನ್ನು ಶಬರಿಮಲೆ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಹಿಂದೂ ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಶಬರಿಮಲೆಗೆ ಯುವತಿಯರು ವಿಧಿವಿಧಾನ ಉಲ್ಲಂಘಿಸಿ ಬರುವ ಸೂಚನೆಗಳು ಹಿಂದೂ ಸಂಘಟನೆಗಳಿಗೆ ಸಿಗುತ್ತಿವೆ. ಇದನ್ನು ತಡೆಯಲು ಶಬರಿಮಲೆಯಲ್ಲಿ ಹೆಚ್ಚಿನ ಹಿಂದೂ ಕಾರ್ಯಕರ್ತರು ಹಾಗೂ ಅಯ್ಯಪ್ಪ ವ್ರತಧಾರಿಗಳನ್ನು ನಿಯೋಜಿಸಲಾಗುತ್ತಿದೆ. ಉಪವಾಸ ವ್ರತದೊಂದಿಗೆ ದರ್ಶನಕ್ಕೆ ಬರುವ ಅಯ್ಯಪ್ಪ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹಿಂದೂ ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ. ಮಂಡಲ ಯಾತ್ರೆಗೆ ಅಡ್ಡಿಪಡಿಸಿದರೆ ಕೆ.ಎಸ್.ಆರ್.ಟಿ.ಸಿ. ವಿರುದ್ಧವೂ ಪ್ರತಿಭಟನೆ ನಡೆಸುವುದಾಗಿ ಭಕ್ತರು ಹೇಳಿರುವರು.
ಕಳೆದ ಕೆಲವು ದಿನಗಳಿಂದ ಶಬರಿಮಲೆಯಲ್ಲಿಯೂ ಧಾರ್ಮಿಕ ವಿಧಿವಿಧಾನಗಳನ್ನು ಉಲ್ಲಂಘಿಸುವ ಯತ್ನ ನಡೆದಿದೆ ಎಂದು ವರದಿಯಾಗಿದೆ. ಶಬರಿಮಲೆಗೆ ತೆರಳುತ್ತಿದ್ದ ಬಾಲಕಿಯನ್ನು ಪೋಲೀಸರು ಹಾಗೂ ಭಕ್ತರು ಹಿಮ್ಮೆಟ್ಟಿಸಿದ್ದಾರೆ. ಪೋಲೀಸರು ತಮಿಳುನಾಡಿನಿಂದ ಆಗಮಿಸಿದ ಮಹಿಳೆಯನ್ನು ವಾಪಸ್ ಕಳುಹಿಸಿದ್ದಾರೆ.