ತ್ರಿಶೂರ್: ಕೇರಳ ಪೊಲೀಸ್ ಇಲಾಖೆ ಐತಿಹಾಸಿಕ ಹೆಜ್ಜೆ ಇಟ್ಟು ಗಮನ ಸೆಳೆದಿದೆ. ಗಂಡು-ಹೆಣ್ಣು ತಾರತಮ್ಯ ಹೋಗಲಾಡಿಸಲು ಡಾಗ್ ಸ್ಕ್ವಾಡ್ ಮಹಿಳಾ ಅಧಿಕಾರಿಯನ್ನು ನೇಮಿಸಿದೆ. ದೇಶದಲ್ಲಿ ಇದೇ ಮೊದಲನೆಯ ನೇಮಕವಾಗಿದೆ.
ಇಡುಕ್ಕಿಯ ಪಣಿಕಂಕುಡಿ ಮೂಲದ ತ್ರಿಶೂರ್ ಪೊಲೀಸ್ ಅಕಾಡೆಮಿಯ ಎ.ಎಸ್.ಐ. ಬಿಂದುವನ್ನು ಮೊದಲ ಕೇರಳ ಪೊಲೀಸರ ಶ್ವಾನದಳಕ್ಕೆ ನಿಯೋಜಿಸಲಾಗಿದೆ. ತರಬೇತಿಗಾಗಿ ಬೆಲ್ಜಿಯಂ ಮಾಲಿನೋಯಿಸ್ ತಳಿಯ ಎರಡು ತಿಂಗಳ ನಾಯಿಮರಿಯನ್ನು ಬಿಂದು ಪಡೆದಿರುವರು. ನಾಯಿಯನ್ನು ಇಬ್ಬರು ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತದೆ.
ಒಂಬತ್ತು ತಿಂಗಳ ತರಬೇತಿಯ ಅಗತ್ಯವಿದ್ದು ಬಿಂದು ಅವರು ಒಂದು ತಿಂಗಳ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ಬಿಂದು ಅವರ ಪತಿ ಮಾನಂತವಾಡಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ ಟು ಶಿಕ್ಷಕರಾಗಿದ್ದಾರೆ.
1959 ರಲ್ಲಿ ಕೆ 9 ವಿಂಗ್ ಎಂದೂ ಕರೆಯಲ್ಪಡುವ ಕೇರಳ ಪೊಲೀಸರ ಶ್ವಾನದಳವನ್ನು ಪ್ರಾರಂಭಿಸಲಾಗಿತ್ತು. ರಾಜ್ಯದ 14 ಜಿಲ್ಲೆಗಳಲ್ಲೂ ಕಾರ್ಯನಿರ್ವಹಿಸುತ್ತಿವೆ. ನಾಯಿಮರಿಗಳು ಹುಟ್ಟುವ ತಿಂಗಳ ಮೊದಲೇ ಸ್ಕ್ಯಾಡ್ ತಂಡಕ್ಕೆ ನೀಡಲಾಗುತ್ತದೆ. ನಂತರ ಅವರು ನಾಯಿಮರಿಗಳಿಗೆ ತರಬೇತಿ ನೀಡುತ್ತಾರೆ.