ಬದಿಯಡ್ಕ: ಕಿತ್ತಳೆ ಹಣ್ಣು ಮಾರಾಟ ಮಾಡಿ ಬಂದ ಹಣ ಸಂಗ್ರಹಿಸಿ ವಿದ್ಯಾಲಯ ನಿರ್ಮಿಸಿ ಮಾದಿರಿಯಾಗಿ ದೇಶವೇ ಗುರುತಿಸುವಂತೆ ಮಾಡಿ ಪದ್ಮಶ್ರೀ ಪುರಸ್ಕøತರಾದ ಹರೇಕಳ ಹಾಜಬ್ಬ ಅವರನ್ನು ಆಲಂಪಾಡಿಯ ಸಾಮಾಜಿಕ ಸಾಂಸ್ಕøತಿಕ ಸಂಘಟನೆ ಆಸ್ಕ್ ವತಿಯಿಂದ ಆಲಂಪಾಡಿ ಆಸ್ಕ್ ಜಂಕ್ಷನ್ ನಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಸಮಾರಂಭ ಉದ್ಘಾಟಿಸಿ, ನಗದು ಮತ್ತು ಪ್ರಶಸ್ತಿ ಫಲಕ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಆಸ್ಕ್ ಸಂಘಟನೆ ಅಧ್ಯಕ್ಷ ಗಫೂರ್ ಆಲಂಪಾಡಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಎ.ಬಿ.ಕುಟ್ಯಾನ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾಸರಗೋಡು ಬ್ಲಾಕ್ ಪಂಚಾಯತಿ ಆರೋಗ್ಯ ಸ್ಥಾಯೀ ಸಮಿತಿ ಅ|ಧ್ಯಕ್ಷೆ ಸಕೀನ ಅಬ್ದುಲ್ಲ, ಸಲೀಂ ಮಾಸ್ತರ್, ಮುಹಮ್ಮದ್ ಮೇಲತ್ತ್, ಆಸ್ಕ್ ಜೆಸಿಸಿ ಚಟುವಟಿಕೆ ಸಮಿತಿ ಸದಸ್ಯ ಸಿ.ಬಿ.ಮೊಹಮ್ಮದ್, ಜಬೀರ್ ಮೊದಲಾದವರು ಉಪಸ್ಥಿತರಿದ್ದರು. ಆಸ್ಕ್ ಪ್ರಧಾನ ಕಾರ್ಯದರ್ಶಿ ಸಿದ್ದಿಕಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಜಿಲಾನಿ ವಂದಿಸಿದರು.