ಮಧೂರು: ಭಾರತ ದೇಶದ ಚರಿತ್ರೆಯನ್ನು ಅವಲೋಕಿಸಿದರೆ ಒಬ್ಬೊಬ್ಬರ ಸಾಧನೆ, ಕೊಡುಗೆಗಳು ವೈವಿಧ್ಯಮಯವಾಗಿ ಅಪಾರವಾದದು. ಸಂಸ್ಕøತಿ ಬೆಳೆಯಬೇಕು, ಪಾಲಿಸಬೇಕು ಇದು ನಮ್ಮೆಲ್ಲರ ಕರ್ತವ್ಯ ಎಂದು ಧಾರ್ಮಿಕ ಮುಂದಾಳು ಕುಂಟಾರು ರವೀಶ ತಂತ್ರಿ ತಿಳಿಸಿದರು.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ಸಿರಿಬಾಗಿಲು ಯಕ್ಷಾನುಗ್ರಹದಲ್ಲಿ ಭಾನುವಾರ ನಡೆದ ನಿರ್ಮಾಣಗೊಳ್ಳುತ್ತಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದ ಕುರಿತಾದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಡಿನಾಡು ಕಾಸರಗೋಡಿನಲ್ಲಿ ಕಲೆ-ಸಂಸ್ಕøತಿ ಯನ್ನು ಉಳಿಸಿ ಬೆಳೆಸಿದ ಮಹನೀಯರು ಹಲವು ಮಂದಿ. ಅದರಲ್ಲಿ ಸಿರಿಬಾಗಿಲು ವೆಂಕಪಯ್ಯ ನವರ ಕೊಡುಗೆ ತುಂಬಾ ಇದೆ. ಅವರ ಹೆಸರನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ಅವರ ಹೆಸರಿನ ಬೃಹತ್ ಸಾಂಸ್ಕೃತಿಕ ಭವನ ಮುಂದಿನ ಮೇ ತಿಂಗಳಲ್ಲಿ ಲೊಕಾರ್ಪಣೆ ಆಗಲಿದೆ. ಕಲೆ- ಸಂಸ್ಕೃತಿಯ ಸಮಗ್ರ ಚಟುವಟಿಕೆಗೆ ಮೀಸಲಾಗಿರಿಸುವ ಭವನಕ್ಕೆ ಎಲ್ಲರ ಸಹಕಾರ ಅಗತ್ಯ. ಎಂದು ಅವರು ಕರೆನೀಡಿದರು.
ಪ್ರತಿಷ್ಠಾನದ ಲಕ್ಷ್ಮೀ ನಾರಾಯಣ ತಂತ್ರಿ ಕಾವುಮಠ, ಜಯರಾಮ ರೈ ಸಿರಿಬಾಗಿಲು, ಮಾಜಿ ಪಂಚಾಯತಿ ಸದಸ್ಯ, ಮಧೂರು ಪಂಚಾಯತಿ ಬಿ.ಜೆ.ಪಿ ಅಧ್ಯಕ್ಷ ರವೀಂದ್ರ ರೈ ಉಪಸ್ಥಿತರಿದ್ದು ಶುಭ ಹಾರೈಸಿದರು. ನವನೀತ ರೈ ಕಜೆ, ಬಾಲಕೃಷ್ಣ ಶೆಟ್ಟಿ, ಸುಬ್ರಾಯ ಹೊಳ್ಳ ನೀರಾಳ, ಅಮ್ಮು ಪೂಜಾರಿ, ಮಣಿಕಂಠನ್, ರಾಮಕೃಷ್ಣ ಶೆಟ್ಟಿ ಬೇರ, ಚಂದ್ರಶೇಖರ ನೀರಾಳ, ನಂದಕಿಶೋರ ಆಳ್ವ, ಸುಜೇಶ್ ಕುಮಾರ್ ಆಳ್ವ, ಶೈಲೇಶ, ಚಂದ್ರಹಾಸ ಶೆಟ್ಟಿ, ಪ್ರಸನ್ನ ಕಾರಂತ ದೇಶಮಂಗಲ, ಸುದೀಪ್ ಶೆಟ್ಟೆ ಮುಂತಾದವರು, ಸಂಘ- ಸಂಸ್ಥಯ ಪದಾಧಿಕಾರಿಗಳು, ಮಹಿಳಾ ಪ್ರತಿನಿಧಿಗಳು ಭಾಗವಹಿಸಿದ್ದರು. ಸನಾತನ ಬಾಲ ಗೋಕುಲ ಬೆದ್ರಡ್ಕ ಇದರ ಮಕ್ಕಳು ಪ್ರಾರ್ಥನೆ ನಡೆಸಿದರು. ಜಗದೀಶ್ ಕೂಡ್ಲು ನಿರೂಪಿಸಿದರು.