ಪತ್ತನಂತಿಟ್ಟ: ಶಬರಿಮಲೆ ಮಂಡಲ ಪೂಜೆಗೆ ದಿವಸಗಳಷ್ಟೇ ಬಾಕಿ ಇರುವಂತೆ ಶಬರಿಮಲೆ ಪರಿಸರದಲ್ಲಿ ವ್ಯಾಪಾರ ಮಳಿಗೆಗಳ ಹರಾಜು ಸ್ವೀಕರಿಸಲು ಹಿಂದೇಟು ಹಾಕುತ್ತಿರುವುದಾಗಿ ತಿಳಿದುಬಂದಿದೆ. ಇಲ್ಲಿಯವರೆಗೆ ಕೇವಲ 26 ಅಂಗಡಿಗಳು ಮಾತ್ರ ಹರಾಜಿಗೆ ಹೋಗಿವೆ. ಗುರುವಾರ ನಡೆದ ಹರಾಜು ಕೂಡಾ ವಿಫಲವಾಗಿದೆ. ಕೊರೊನಾ ಮಾರ್ಗದರ್ಶನದ ಹೆಸರಿನಲ್ಲಿ ಭಕ್ತರಿಗೆ ನಿರ್ಬಂಧ ಹೇರಿದ್ದರಿಂದ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಹರಾಜು ಹಾಕಲು ಹಿಂದೇಟು ಹಾಕಿದ್ದರು.
ಮೂಲ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದ್ದರೂ ವರ್ತಕರು ಹರಾಜಿನಿಂದ ದೂರ ಉಳಿದಿರುವುದರಿಂದ ದೇವಸ್ವಂ ಮಂಡಳಿ ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಸನ್ನಿಧಾನ, ಪಂಪಾ ಮತ್ತು ನಿಲಕ್ಕಲ್ ನಲ್ಲಿ ಹರಾಜಾಗಬೇಕಾದ 216 ಅಂಗಡಿಗಳಲ್ಲಿ ಇದುವರೆಗೆ 26 ಮಳಿಗೆಗಳಿಗೆ ಮಾತ್ರ ಹರಾಜು ಸ್ವೀಕರಿಸಲ್ಪಟ್ಟಿದೆ.
ಪಂಪಾದಲ್ಲಿ 45 ಲಕ್ಷ ರೂ.ಗೆ ಎಳನೀರು ಮಾರಾಟ ಮಳಿಗೆ ಹೊರತುಪಡಿಸಿ ಉಳಿದೆಲ್ಲ ಅಂಗಡಿಗಳು ದೇವಸ್ವಂ ಮಂಡಳಿ ನಿಗದಿಪಡಿಸಿದ ಮೊತ್ತದ ಶೇ.35ಕ್ಕಿಂತ ಕಡಿಮೆ ಮೊತ್ತಕ್ಕೆ ಹರಾಜಾಗಿದೆ.
ಮುಂದಿನ ದಿನಗಳಲ್ಲಿ ಹರಾಜು ಪ್ರಕ್ರಿಯೆ ಮುಂದುವರಿಯಲಿದೆ. ಹರಾಜು ಪ್ರಕ್ರಿಯೆ ಪೂರ್ಣಗೊಳ್ಳದಿದ್ದಲ್ಲಿ ದೇವಸ್ವಂ ಮಂಡಳಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಳ್ಳಲಿದೆ. ಆದರೆ ಮಂಡಳಿಯ ನಷ್ಟವನ್ನು ಸರಿದೂಗಿಸಲು ಆ ಕ್ರಮವೂ ಸಾಕಾಗುವುದಿಲ್ಲ ಎನ್ನಲಾಗಿದೆ.