ಬದಿಯಡ್ಕ: 68ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಭಾಗವಾಗಿ ಕ್ಯಾಂಪ್ಕೋ ವತಿಯಿಂದ ಎಡನೀರು ಶ್ರೀ ಮಠಕ್ಕೆ ಭೇಟಿ ನೀಡಲಾಯಿತು. ಈ ಸಂದಭರ್Àದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಾದ ಮಂತ್ರಾಕ್ಷತೆಗಳನ್ನು ನೀಡಿದರು.
ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ನಿರ್ದೇಶಕರಾದ ಕೆ.ಬಾಲಕೃಷ್ಣ ರೈ, ಜಯರಾಮ ಸರಳಾಯ, ಪದ್ಮರಾಜ ಪಟ್ಟಾಜೆ, ಡಾ. ಜಯಪ್ರಕಾಶ ನಾರಾಯಣ ಟಿ.ಕೆ., ರಾಧಾಕೃಷ್ಣನ್ ಕೆ., ಬದಿಯಡ್ಕ ವಲಯ ವ್ಯವಸ್ಥಾಪಕರು, ಕಾಸರಗೋಡು ಶಾಖಾ ವ್ಯವಸ್ಥಾಪಕರು, ಬದಿಯಡ್ಕ ಶಾಖಾ ವ್ಯವಸ್ಥಾಪಕರು, ಕೇರಳ ಕ್ಯಾಂಪ್ಕೋ ಚಾಕೊಲೇಟ್ ಮಾರ್ಕೆಟಿಂಗ್ ಸಿಬ್ಬಂದಿ ಮತ್ತು ಕ್ಯಾಂಪ್ಕೋ ಸಿಬ್ಬಂದಿಗಳು ಉಪಸ್ಥಿತಿದ್ದರು.