HEALTH TIPS

ಇಸ್ರೇಲ್ ನಿರ್ಮಿತ ವಿಧ್ವಂಸಕ ಹೆರಾನ್ ಡ್ರೋನ್ ಭಾರತೀಯ ಸೇನೆ ಬತ್ತಳಿಕೆಗೆ, ಲಡಾಖ್ ಸೆಕ್ಟರ್ ನಲ್ಲಿ ನಿಯೋಜನೆ

      ನವದೆಹಲಿ: ಇಸ್ರೇಲ್ (Israel) ನಿರ್ಮಿತ ವಿಧ್ವಂಸಕ ಹೆರಾನ್ ಡ್ರೋನ್(Heron drone) ಕೊನೆಗೂ ಭಾರತೀಯ ಸೇನೆ (Indian Army)ಯ ಬತ್ತಳಿಕೆ ಸೇರಿದ್ದು, ಲಡಾಖ್ ಸೆಕ್ಟರ್ (Ladakh sector) ನಲ್ಲಿ ನಿಯೋಜನೆಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ.
     ಈ ಹಿಂದೆಯೇ ಭಾರತ ಸರ್ಕಾರ (Indian Govt.)ಭಾರತೀಯ ಸೇನಾ ಸಾಮರ್ಥ್ಯವನ್ನು ಮೇಲ್ದರ್ಜೆಗೇರಿಸಲು ಸುಮಾರು 500 ಕೋಟಿ ರೂಗಳ ಉಪಕರಣಗಳು ಮತ್ತು ವ್ಯವಸ್ಥೆಗಳನ್ನು ಖರೀದಿಗೆ ಮುಂದಾಗಿತ್ತು. ಅದರಂತೆ ಇಸ್ರೇಲ್ ನಿಂದ ಹೆರಾನ್ ಡ್ರೋನ್ ಗಳನ್ನು ಮತ್ತು ಇತರೆ ಕ್ಷಿಪಣಿಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಈ ಹಿಂದೆಯೇ ಹೆರಾನ್ ಡ್ರೋನ್ ಭಾರತಕ್ಕೆ ಆಗಮಿಸಬೇಕಿತ್ತು. ಆದರೆ ಕೋವಿಡ್        ಸಾಂಕ್ರಾಮಿಕದಿಂದಾಗಿ ಡ್ರೋನ್ ವಿತರಣೆ ತಡವಾಗಿತ್ತು. ಇದೀಗ ಅಧಿಕೃತವಾಗಿ ಇಸ್ರೇಲ್ ಭಾರತಕ್ಕೆ ತನ್ನ ಹೆರಾನ್ ಡ್ರೋನ್ ಅನ್ನು ಭಾರತಕ್ಕೆ ವಿತರಣೆ ಮಾಡಿದ್ದು ಶೀಘ್ರದಲ್ಲೇ ಲಡಾಖ್ ಗಡಿಯಲ್ಲಿ ನಿಯೋಜಿಸಲಾಗುತ್ತದೆ ಎಂದು ಸೇನಾಮೂಲಗಳು ತಿಳಿಸಿವೆ.
      ಲಡಾಖ್ ಸೆಕ್ಟರ್‌ನಲ್ಲಿ ಚೀನಾದ ಚಟುವಟಿಕೆಗಳ ಮೇಲೆ ಕಣ್ಣಿಡಲು ಇಸ್ರೇಲ್ ತುರ್ತು ಸಂಗ್ರಹಣೆ ಷರತ್ತಿನ ಅಡಿಯಲ್ಲಿ ಸುಧಾರಿತ ಹೆರಾನ್ ಡ್ರೋನ್‌ಗಳನ್ನು ತಲುಪಿಸಿರುವುದರಿಂದ ಭಾರತೀಯ ಸೇನೆಯ ಕಣ್ಗಾವಲು ಸಾಮರ್ಥ್ಯಗಳು ಹೆಚ್ಚಿನ ಉತ್ತೇಜನವನ್ನು ಪಡೆದಂತಾಗಿದೆ. ಈ ಕುರಿತು ಮಾಹಿತಿ ನೀಡಿರುವ ಸರ್ಕಾರದ ಉನ್ನತ ಮೂಲಗಳು, ಇಸ್ರೇಲ್ ನಿರ್ಮಿತ 'ಸುಧಾರಿತ ಹೆರಾನ್ ಡ್ರೋನ್‌ಗಳು ದೇಶಕ್ಕೆ ಬಂದಿವೆ ಮತ್ತು ಪೂರ್ವ ಲಡಾಖ್ ವಲಯದಲ್ಲಿ ಕಣ್ಗಾವಲು ಕಾರ್ಯಾಚರಣೆಗಾಗಿ ಇವುಗಳನ್ನು ನಿಯೋಜಿಸಲಾಗುತ್ತಿದೆ" ಎಂದು ತಿಳಿಸಿವೆ.
      ಈಗಾಗಲೇ ಈ ಹೆರಾನ್ ಡ್ರೋನ್ ಗಳನ್ನು ದೇಶದ ವಿವಿಧೆಡೆ ನಿಯೋಜಿಸಲಾಗಿದ್ದು, ಈ ಹಿಂದೆ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು (Venkaiah Naidu) ಅವರ ಅರುಣಾಚಲ ಪ್ರದೇಶ (Arunachal Pradesh) ವಿಧಾನಸಭೆ ಭೇಟಿಯನ್ನು ಚೀನಾ (China) ವಿರೋಧಿಸಿದ ಬೆನ್ನಲ್ಲೇ, ಅದಕ್ಕೆ ಪಾಠ ಕಲಿಸುವ ಮತ್ತು ಅರುಣಾಚಲ ಪ್ರದೇಶ ಸೆಕ್ಟರ್‌ನಲ್ಲಿ ಚೀನಾ ಯೋಧರ ಮೇಲೆ ಕಣ್ಗಾವಲು ವಹಿಸಲು 24 ಗಂಟೆ ಕಣ್ಗಾವಲು ವ್ಯವಸ್ಥೆಯನ್ನು ಭಾರತ ಸರ್ಕಾರ (Indian Govt) ನಿಯೋಜಿಸಿತ್ತು.  ಇದಕ್ಕಾಗಿ ಭಾರತೀಯ ವಾಯುಪಡೆಯ ‘ರುದ್ರ’ ಹೆಲಿ​ಕಾ​ಪ್ಟ​ರ್‌ ಮತ್ತು ಇಸ್ರೇಲ್‌ ಅಭಿವೃದ್ಧಿಪಡಿಸಿದ ಡ್ರೋನ್‌ಗಳನ್ನು ನಿಯೋಜಿಸಲಾಗಿತ್ತು. ಅಂತೆಯೇ ಈಗ ಸೇನೆಯಲ್ಲಿ ಅಸ್ತಿತ್ವದಲ್ಲಿರುವ ದಾಸ್ತಾನು ಡ್ರೋನ್ ಗಳಲ್ಲಿ ಹೆರಾನ್‌ಗಳಿಗಿಂತ ಹೆಚ್ಚು ಸುಧಾರಿತ ಡ್ರೋನ್ ಗಳಿವೆ. ಅದಾಗ್ಯೂ ಹೆರಾನ್ ಡ್ರೋನ್ ನ ಆಂಟಿ-ಜಾಮಿಂಗ್ ಸಾಮರ್ಥ್ಯವು ಅವುಗಳ ಹಿಂದಿನ ಆವೃತ್ತಿಗಳಿಗಿಂತ ಉತ್ತಮವಾಗಿದೆ ಎಂದು ಮೂಲಗಳು ತಿಳಿಸಿವೆ.
       ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರಕ್ಷಣಾ ಪಡೆಗಳಿಗೆ ನೀಡಲಾದ ತುರ್ತು ಹಣಕಾಸು ಅಧಿಕಾರದ ಅಡಿಯಲ್ಲಿ ಈ ಡ್ರೋನ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ, ಇದರ ಅಡಿಯಲ್ಲಿ ಅವರು ಚೀನಾದೊಂದಿಗೆ ನಡೆಯುತ್ತಿರುವ ಗಡಿ ಸಂಘರ್ಷದ ಮಧ್ಯೆ ತಮ್ಮ ಯುದ್ಧ ಸಾಮರ್ಥ್ಯವನ್ನು ಸುಧಾರಿಸಲು 500 ಕೋಟಿ ರೂಪಾಯಿ ಮೌಲ್ಯದ ಉಪಕರಣಗಳು ಮತ್ತು ವ್ಯವಸ್ಥೆಗಳನ್ನು ಖರೀದಿಸಬಹುದು. 
        ಸೇನಾ ಬತ್ತಳಿಕೆಯಲ್ಲಿ ಮಿನಿ ಡ್ರೋನ್ ಗಳು
ಇನ್ನು ಮೂಲಗಳ ಪ್ರಕಾರ, ಇತರ ಸಣ್ಣ ಅಥವಾ ಮಿನಿ ಡ್ರೋನ್‌ಗಳನ್ನು ಭಾರತೀಯ ಡ್ರೋನ್ ತಯಾರಿಕಾ ಸಂಸ್ಥೆಗಳಿಂದ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಭಾರತೀಯ ರಕ್ಷಣಾ ಪಡೆಗಳು ಚೀನಾದೊಂದಿಗೆ ನಡೆಯುತ್ತಿರುವ ಸಂಘರ್ಷದಲ್ಲಿ ಸಹಾಯ ಮಾಡುವ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಪಡೆಯಲು ಈ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. 2019 ರಲ್ಲಿ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ಬಾಲಾಕೋಟ್ ವೈಮಾನಿಕ ದಾಳಿಯ ನಂತರ ರಕ್ಷಣಾ ಪಡೆಗಳಿಗೆ ಕೊನೆಯ ಬಾರಿಗೆ ಇಂತಹ ಸೌಲಭ್ಯವನ್ನು ನೀಡಲಾಗಿತ್ತು. ಅದೇ ಸೌಲಭ್ಯವನ್ನು ಬಳಸಿಕೊಂಡು, ಭಾರತೀಯ ನೌಕಾಪಡೆಯು ಅಮೆರಿಕದ ಜನರಲ್ ಅಟಾಮಿಕ್ಸ್‌ನಿಂದ ತೆಗೆದುಕೊಳ್ಳಲಾದ ಎರಡು ಪ್ರಿಡೇಟರ್ ಡ್ರೋನ್‌ಗಳನ್ನು ಗುತ್ತಿಗೆಗೆ ತೆಗೆದುಕೊಂಡಿದೆ.
     ಸುಮಾರು 70 ಕಿಲೋಮೀಟರ್‌ಗಳ ಸ್ಟ್ರೈಕ್ ವ್ಯಾಪ್ತಿಯೊಂದಿಗೆ ಹ್ಯಾಮರ್ ಏರ್ ಟು ಗ್ರೌಂಡ್ ಸ್ಟ್ಯಾಂಡ್‌ ಆಫ್ ಕ್ಷಿಪಣಿಗಳೊಂದಿಗೆ ಹೆಚ್ಚಿನ ಸಂಖ್ಯೆಯ ಟ್ಯಾಂಕ್ ವಿರೋಧಿ ಮಾರ್ಗದರ್ಶಿ ಕ್ಷಿಪಣಿಗಳು, ದೀರ್ಘ-ಶ್ರೇಣಿಯ ನಿಖರ-ನಿರ್ದೇಶಿತ ಫಿರಂಗಿ ಶೆಲ್‌ಗಳನ್ನು ಪಡೆಯಲು ಭಾರತೀಯ ವಾಯುಪಡೆಯು ಅದೇ ಅಧಿಕಾರವನ್ನು ಚಲಾಯಿಸಿತ್ತು. ಬಂಡವಾಳ ಸ್ವಾಧೀನ ಮಾರ್ಗದ ಅಡಿಯಲ್ಲಿ ತುರ್ತು ಖರೀದಿ ಅಧಿಕಾರಗಳು ಈ ವರ್ಷ ಆಗಸ್ಟ್ 31 ರಂದು ಕೊನೆಗೊಂಡಿವೆ. ಸಶಸ್ತ್ರ ಪಡೆಗಳು ಅಂತಿಮ ಹಂತದಲ್ಲಿ ಇನ್ನೂ ಕೆಲವು ಯೋಜನೆಗಳನ್ನು ಹೊಂದಿವೆ ಮತ್ತು ಅವರು ವಿಸ್ತರಣೆಯನ್ನು ಪಡೆದರೆ, ಅವರು ತಮ್ಮ ಯುದ್ಧ ಸಾಮರ್ಥ್ಯಗಳನ್ನು ಸುಧಾರಿಸಲು ಆ ಸಲಕರಣೆಗಳನ್ನು ಖರೀದಿಸಲು ಮುಂದುವರಿಯಬಹುದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries