ಕೊಟ್ಟಾರಕ್ಕರ: ಇಂಧನ ತೆರಿಗೆ ಇಳಿಸಲು ರಾಜ್ಯ ಸರ್ಕಾರ ಮುಂದಾಗದಿರುವುದನ್ನು ಖಂಡಿಸಿ ಬಿಜೆಪಿ ವತಿಯಿಂದ ವಿತ್ತ ಸಚಿವ ಕೆ.ಎನ್.ಬಾಲಗೋಪಾಲ್ ಅವರ ಮನೆಗೆ ಪಾದಯಾತ್ರೆ ನಡೆಸಲಾಯಿತು. ಬಿಜೆಪಿ ಕೊಟ್ಟಾರಕ್ಕರ ಕ್ಷೇತ್ರ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಮನೆ ಬಳಿ ಪೋಲೀಸರು ಬ್ಯಾರಿಕೇಡ್ ಹಾಕಿ ಮೆರವಣಿಗೆಯನ್ನು ತಡೆದರು. ಬಿಜೆಪಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಕೆ.ಆರ್.ರಾಧಾಕೃಷ್ಣನ್ ಅಧ್ಯಕ್ಷತೆ ವಹಿಸಿದ್ದ ಪ್ರತಿಭಟನಾ ಸಭೆಯನ್ನು ಕ್ಷೇತ್ರದ ಅಧ್ಯಕ್ಷ ನ್ಯಾಯವಾದಿ ಸೋಮನ್ ಉದ್ಘಾಟಿಸಿದರು.
ಜನರನ್ನು ಲೂಟಿ ಮಾಡುವ ನೀತಿಯನ್ನು ಬದಲಾಯಿಸದ ಹೊರತು ಕೊಟ್ಟಾರಕ್ಕರ ಶಾಸಕ, ಹಣಕಾಸು ಸಚಿವರು ಕ್ಷೇತ್ರದಲ್ಲಿ ಸಂಚರಿಸಲು ಸಾಧ್ಯವಿಲ್ಲ ಎಂದು ಮುಖಂಡರು ಎಚ್ಚರಿಸಿದರು. ಬಿಜೆಪಿ ಮತ್ತು ಯುವ ಮೋರ್ಚಾ ಮುಂದಿನ ದಿನಗಳಲ್ಲಿ ಕೊಟ್ಟಾರಕ್ಕರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸಚಿವರು ಪಾಲ್ಗೊಳ್ಳಬೇಕೆ ಎಂದು ನಿರ್ಧರಿಸುವರು ಎoದು ತಿಳಿಸಲಾಗಿದೆ. ಈಗ ನಡೆಸಿದ ಧರಣಿ ಸಾಂಕೇತಿಕ ಎಂದು ಮುಖಂಡರು ಹೇಳಿದರು.