HEALTH TIPS

ದೀಪಾವಳಿ ಪಟಾಕಿ ಹಚ್ಚುವಾಗ ಸುಟ್ಟ ಗಾಯಗಳಾದರೆ ಮನೆಯಲ್ಲಿಯೇ ಹೀಗೆ ಮಾಡಿ

               ಬೆಳಕಿನ ಹಬ್ಬದೀಪಾವಳಿಯಂದು ಮನೆಯಲ್ಲಿ ಪಟಾಕಿಯ ಬೆಳಕು ಇಲ್ಲದಿದ್ದರೆ ಹಬ್ಬ ಅಪೂರ್ಣವೆನಿಸುತ್ತದೆ. ದೀಪಾವಳಿಯಂದು ಪಟಾಕಿ ಹೊಡೆಯುವುದು ಮಕ್ಕಳಿಗೆ ತುಂಬಾ ಇಷ್ಟ. ಇದರ ಬೆಳಕು ಮತ್ತು ಸದ್ದು ಮಕ್ಕಳಿಗೆ ಖುಷಿ ನೀಡುತ್ತದೆ. ಆದರೆ, ಪಟಾಕಿ ಹಚ್ಚುವಾಗ ಎಚ್ಚರಿಕೆ ವಹಿಸುವುದು ಅಗತ್ಯ. ದೇಹದಿಂದ ಕನಿಷ್ಠ 5 ಮೀಟರ್ ದೂರದಲ್ಲಿ ಪಟಾಕಿಗಳನ್ನು ಸಿಡಿಸಿ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ. ಏಕೆಂದರೆ, ಪಟಾಕಿಗಳಿಂದ ಅವಘಡ ಸಂಭವಿಸಿರುವುದನ್ನು ಹಿಂದಿನಂದಲೂ ಕೇಳಿಕೊಂಡು ಬರುತ್ತಿದ್ದೇವೆ.


             ಈ ಪಟಾಕಿಯಿಂದ ಸುಟ್ಟಗಾಯಕ್ಕೆ ತಕ್ಷಣವೇ ಚಿಕಿತ್ಸೆ ನೀಡದಿದ್ದರೆ, ಅದು ಸಮಸ್ಯೆಗಳನ್ನು ಉಂಟುಮಾಡಬಹುದು. ದೀಪಾವಳಿಯಂದು ಪಟಾಕಿ ಹೊಡೆಯುವ ಸಮಯದಲ್ಲಿ ಯಾರಾದರೂ ವ್ಯಕ್ತಿಯ ಕೈ ಸುಟ್ಟರೆ, ತಕ್ಷಣ ಮನೆಯಲ್ಲಿ ಪ್ರಥಮ ಚಿಕಿತ್ಸೆ ಮಾಡಿ. ಆದ್ದರಿಂದ ಈ ಸುಟ್ಟಗಾಯಗಳಿಗೆ ಹೇಗೆ ಚಿಕಿತ್ಸೆ ನೀಡಬೇಕು ಎಂಬುದನ್ನು ಇಲ್ಲಿ ತಿಳಿಯೋಣ.

              ಪಟಾಕಿಯಿಂದ ಸುಟ್ಟಗಾಯಕ್ಕೆ ಮಾಡಬೇಕಾದ ಚಿಕಿತ್ಸೆ ಏನು ಎಂಬುದನ್ನು ಈ ಕೆಳಗೆ ನೀಡಲಾಗಿದೆ: 
               ಆಲೂಗಡ್ಡೆಯಿಂದ ಚಿಕಿತ್ಸೆ ನೀಡಿ: ದೀಪಾವಳಿಯಂದು ಪಟಾಕಿ ಸಿಡಿಸುವಾಗ ಮಗುವಿನ ಕೈ ಅಥವಾ ಇನ್ನಾವುದೇ ಭಾಗ ಸುಟ್ಟರೆ ಆಲೂಗಡ್ಡೆ ಬಳಸಿ. ಆಲೂಗಡ್ಡೆಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಗಾಯಗಳನ್ನು ತ್ವರಿತವಾಗಿ ಗುಣಪಡಿಸಲು ಸಹಾಯ ಮಾಡತ್ತದೆ ಜೊತೆಗೆ ತೇವಾಂಶವನ್ನು ನೀಡುತ್ತದೆ. ಆಲೂಗಡ್ಡೆಯನ್ನು ಕತ್ತರಿಸಿ ಸುಟ್ಟ ಜಾಗಕ್ಕೆ ಹಚ್ಚಿದರೆ ಗಾಯಕ್ಕೆ ತಂಪು ಸಿಗುತ್ತದೆ.
           ಸುಟ್ಟ ಜಾಗಕ್ಕೆ ಅರಿಶಿನವನ್ನು ಹಚ್ಚಿ: ದೀಪಾವಳಿಯಂದು ಪಟಾಕಿ ಹಚ್ಚುವಾಗ ಯಾವುದಾದರೂ ಭಾಗ ಸುಟ್ಟರೆ, ಆ ಭಾಗಕ್ಕೆ ಅರಿಶಿನವನ್ನು ಹಚ್ಚಿ. ನಂಜುನಿರೋಧಕ ಗುಣಗಳಿಂದ ಸಮೃದ್ಧವಾಗಿರುವ ಅರಿಶಿನ ಪೇಸ್ಟ್ ಕಿರಿಕಿರಿಯನ್ನು ನಿವಾರಿಸುತ್ತದೆ. ಜೊತೆಗೆ ಉರಿಯನ್ನು ಕಡಿಮೆ ಮಾಡುವುದು.
       ಕಿರಿಕಿರಿ ಕಡಿಮೆ ಮಾಡಲು ಜೇನುತುಪ್ಪ: ಪಟಾಕಿಯಿಂದ ಚರ್ಮ ಸುಟ್ಟರೆ ಜೇನು ತುಪ್ಪ ಹಚ್ಚಿದರೆ ಬೇಗ ಪರಿಹಾರ ಸಿಗುತ್ತದೆ. ಜೇನು ತುಪ್ಪವನ್ನು ಸುಟ್ಟ ಜಾಗಕ್ಕೆ ಹಚ್ಚುವುದರಿಂದ ಕಿರಿಕಿರಿ ಹಾಗೂ ಉರಿಯಿಂದ ಪಾರಾಗಬಹುದು, ಜೊತೆಗೆ ಗಾಯವೂ ಬೇಗನೇ ವಾಸಿಯಾಗುತ್ತದೆ.
                ತಂಪಿನ ಅನುಭವಕ್ಕೆ ಅಲೋವೆರಾ ಬಳಸಿ: ಸುಟ್ಟ ಗಾಯದ ಉರಿಯನ್ನು ಕಡಿಮೆ ಮಾಡಲು ನೀವು ಅಲೋವೆರಾವನ್ನು ಬಳಸಬಹುದು. ಅಲೋವೆರಾದ ತಿರುಳನ್ನು ತೆಗೆದು ಗಾಯದ ಮೇಲೆ ಹಚ್ಚಿದರೆ ತಂಪು ಸಿಗುತ್ತದೆ. ಜೊತೆಗೆ ಗುಳ್ಳೆಗಳಾಗುವುದಿಲ್ಲ.
            ಟೂತ್ಪೇಸ್ಟ್ ಸಹ ಬಳಸಬಹುದು: ಪಟಾಕಿಯಿಂದ ಸುಟ್ಟರೆ ಟೂತ್ ಪೇಸ್ಟ್ ಅನ್ನು ಸುಟ್ಟ ಜಾಗಕ್ಕೆ ಹಚ್ಚಿ. ಇದರಲ್ಲಿರುವ ಕ್ಯಾಲ್ಸಿಯಂ ಕಿರಿಕಿರಿಯನ್ನು ನಿವಾರಿಸುತ್ತದೆ. ಬೊಬ್ಬೆಗಳಾಗುವುದನ್ನು ತಡೆಯುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಮನೆಯಲ್ಲಿ ಯಾರಾದರೂ ಪಟಾಕಿ ಅಥವಾ ಇನ್ನಾವುದೇ ವಸ್ತುಗಳಿಂದ ಸುಟ್ಟುಕೊಂಡಿದ್ದರೆ, ಸಮಯ ವ್ಯರ್ಥ ಮಾಡದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.




Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries