ಪೆರ್ಲ: 'ರಾಷ್ಟ್ರ ಪುನರ್ ನಿರ್ಮಾಣಕ್ಕಾಗಿ ನಮ್ಮೊಂದಿಗೆ ಕೈಜೋಡಿಸಿರಿ' ಧ್ಯೇಯ ವಾಕ್ಯದೊಂದಿಗೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮುಳ್ಳೇರಿಯ ನಗರ ಸಮ್ಮೇಳನ ಪೆರ್ಲ ಭಾರತೀ ಸದನದಲ್ಲಿ ಶುಕ್ರವಾರ ಸಂಜೆ ನಡೆಯಿತು.
ಕೇರಳ ವಲಯ ಎಬಿವಿಪಿ ಜೊತೆ ಕಾರ್ಯದರ್ಶಿ ಇ.ಯು.ಈಶ್ವರ ಪ್ರಸಾದ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮುಳ್ಳೇರಿಯ ನಗರ ಸಮಿತಿ ಅಧ್ಯಕ್ಷ ಅಭಿಲಾಷ್ ಉಕ್ಕಿನಡ್ಕ ಅಧ್ಯಕ್ಷತೆ ವಹಿಸಿದರು.ರಾಜ್ಯ ಸಮಿತಿ ಸದಸ್ಯ ಪ್ರಮೋದ್ ಉಪ್ಪಳ, ಜಿಲ್ಲಾ ಸಮಿತಿ ಕಾರ್ಯದರ್ಶಿ ನಿತಿನ್ ಕುಮಾರ್ ಬೋವಿಕ್ಕಾನ, ಸದಸ್ಯ ರೋಹಿತ್, ಚೈತ್ರಾ, ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.ನಗರ ಸಮಿತಿ ಅಧ್ಯಕ್ಷರಾಗಿ ಗೌತಮ್ ಕೊಡವಂಜಿ, ಕಾರ್ಯದರ್ಶಿ ನಿತಿನ್ ಬೆಳಿಂಜ ಆಯ್ಕೆಯಾದರು.ನಗರ ಕಾರ್ಯ ನಿರ್ವಾಹಕ ಸಮಿತಿ ಸದಸ್ಯೆ ಭಾಗ್ಯಲಕ್ಷ್ಮಿ ಸ್ವಾಗತಿಸಿದರು.ನಗರ ಕಾರ್ಯದರ್ಶಿ ನಿತಿನ್ ಬೆಳಿಂಜ ವಂದಿಸಿದರು. ಸಮ್ಮೇಳನದ ಅಂಗವಾಗಿ ಮಧ್ಯಾಹ್ನ ಪೆರ್ಲ ನಾಲಂದ ಕಾಲೇಜು ಪರಿಸರದಿಂದ ಪೆರ್ಲ ಪೇಟೆ ತನಕ ವಿದ್ಯಾರ್ಥಿಗಳ ಮೆರವಣಿಗೆ ನಡೆಯಿತು.