HEALTH TIPS

ಕಸಾಪ ಅಧ್ಯಕ್ಷರಾಗಿ ಡಾ. ಮಹೇಶ್ ಜೋಶಿ ಖಚಿತ

               ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಡಾ. ಮಹೇಶ್ ಜೋಶಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

                    ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷರ ಚುನಾವಣೆ ಭಾನುವಾರ ನಡೆಯಿತು. ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ಸೋಮವಾರ ಮತ ಎಣಿಕೆಯ ವಿವರ ಲಭ್ಯವಾಗಿದ್ದು, ಈ ಪ್ರಕಾರ ಡಾ. ಮಹೇಶ್ ಜೋಶಿ ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತವಾಗಿದೆ.
                  ಡಾ. ಮಹೇಶ್ ಜೋಶಿ ಅವರು 68,525 ಮತ ಪಡೆದಿದ್ದಾರೆ. ಪ್ರಮುಖ ಪ್ರತಿಸ್ಪರ್ಧಿ ಎನ್ನಲಾಗಿದ್ದ ಶೇಖರಗೌಡ ಮಾಲಿಪಾಟೀಲ ಅವರು 22,357 ಮತ ಪಡೆದಿದ್ದಾರೆ. ಡಾ. ಮಹೇಶ್ ಜೋಶಿ ತಮ್ಮ ಪ್ರತಿಸ್ಪರ್ಧಿಯನ್ನು ದಾಖಲೆಯ ಅಂತರ ಅಂದರೆ 46,168 ಮತಗಳ ಅಂತರದಲ್ಲಿ ಮುಂದಿದ್ದಾರೆ. ಇನ್ನೂ ಅಂಚೆ ಮತಗಳ ಎಣಿಕೆ ಕಾರ್ಯ ಬಾಕಿ ಇದೆ. ವಿವಿಧ ಜಿಲ್ಲೆಗಳಿಂದ ಅಂಚೆ ಮತ ಬರಬೇಕಿದ್ದು, ಮಂಗಳವಾರ ಬಾಕಿ ಮತಗಳ ಎಣಿಕೆ ಕಾರ್ಯ ನಡೆಯುತ್ತದೆ. ಬುಧವಾರ (ನ.24)ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗಾಗಿ ನೇಮಿಸಲಾದ ಚುನಾವಣಾಧಿಕಾರಿ ಫಲಿತಾಂಶದ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ.
             ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ಡಾ.ಮಹೇಶ್ ಜೋಶಿ, ಶೇಖರಗೌಡ ಮಾಲೀಪಾಟೀಲ ಸಹಿತ ಒಟ್ಟು 21 ಮಂದಿ ಆಕಾಂಕ್ಷಿಗಳು ಇದ್ದರು. ಇದರಲ್ಲಿ ಇತರೆ ಸ್ಪರ್ಧಿಗಳಾಗಿರುವ ವ.ಚ. ಚನ್ನೇಗೌಡ ಅವರು 16,755, ಸಿ.ಕೆ. ರಾಮೇಗೌಡ 14,110, ಮಾಯಣ್ಣ 8791 ಮತ ಪಡೆದಿದ್ದಾರೆ. ಉಳಿದವರೆಲ್ಲರೂ ಇದಕ್ಕಿಂತ ಕಡಿಮೆ ಮತಗಳನ್ನು ಪಡೆದಿದ್ದಾರೆ. 
                       ಶೇ.52ರಷ್ಟು ಮತದಾನ:
           ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಒಟ್ಟಾರೆ. 3.05 ಲಕ್ಷ ಮತದಾರರು ಇದ್ದಾರೆ. ಇದರಲ್ಲಿ 1.59 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಒಟ್ಟಾರೆ ಶೇ 52ರಷ್ಟು ಮತದಾನ ನಡೆದಿದೆ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾನ ಪ್ರಕ್ರಿಯೆ ನಡೆಯಿತು. ಅಲ್ಲದೆ, ರಾಜ್ಯದಾದ್ಯಂತ 420 ಮತಗಟ್ಟೆ ಕೇಂದ್ರಗಳು ಇದ್ದವು. ಭಾನುವಾರ (ನ.21)ದಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ಪ್ರಕ್ರಿಯೆ ನಡೆಯಿತು. ಕೊಡಗಿನಲ್ಲಿ ಗರಿಷ್ಠ ಶೇ.71.18ರಷ್ಟು ಮತದಾನ ನಡೆದರೆ, ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.28.88 ರಷ್ಟು ಮಾತ್ರ ಹಕ್ಕು ಚಲಾವಣೆಯಾಗಿದ್ದು, ಅತಿ ಕಡಿಮೆ ಮತದಾನ ನಡೆದ ಜಿಲ್ಲೆ ಎನಿಸಿಕೊಂಡಿದೆ.
                ಪರಿಷತ್ತಿಗೆ ಮತ್ತೊಬ್ಬ ನಿವೃತ್ತ ಅಧಿಕಾರಿ: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 25ನೇ ಅಧ್ಯಕ್ಷರಾಗಿ ನಿವೃತ್ತ ಕೆ.ಎ.ಎಸ್. ಅಧಿಕಾರಿ ಮನು ಬಳಿಗಾರ ಕಾರ್ಯನಿರ್ವಹಿಸಿದ್ದಾರೆ. ಈಗ ಡಾ. ಮಹೇಶ್ ಜೋಶಿ ಅವರು ಅಧ್ಯಕ್ಷರಾಗಲಿದ್ದು, ಅವರೂ ಸಹ ಕೇಂದ್ರ ಸರ್ಕಾರಿ ಸ್ವಾಮ್ಯದ ದೂರದರ್ಶನ ಚಂದನ ವಾಹಿನಿಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಧ್ಯಕ್ಷರ ಅಧಿಕಾರಾವಧಿ ಐದು ವರ್ಷ ಇರುತ್ತದೆ.
                  ಕಸಾಪ ಜಿಲ್ಲಾ ಘಟಕಗಳಿಗೆ ಆಯ್ಕೆಯಾದವರು: ಬೆಂಗಳೂರು ನಗರ- ಎಂ. ಪ್ರಕಾಶ್ ಮೂರ್ತಿ ಬೆಂಗಳೂರು ಗ್ರಾಮಾಂತರ - ಬಿ.ಎನ್. ಕೃಷ್ಣಪ್ಪ ರಾಮನಗರ ಬಿ.ಟಿ. ನಾಗೇಶ್ ತುಮಕೂರು ಕೆ.ಎಸ್. ಸಿದ್ದಲಿಂಗಪ್ಪ ಕೋಲಾರ ಬಿ.ಎನ್. ಗೋಪಾಲಗೌಡ ಚಿಕ್ಕಬಳ್ಳಾಪುರ ಪ್ರೊ. ಕೋಡಿ ರಂಗಪ್ಪ ಮಂಡ್ಯ ರವಿಕುಮಾರ್ ಚಾಮಲಾಪುರ ಮೈಸೂರು ಮಡ್ಡಿಕೇರಿ ಗೋಪಾಲ್ ಚಾಮರಾಜನಗರ ಶೈಲ ಕುಮಾರ್
 ಹಾಸನ ಎಚ್.ಎಲ್. ಮಲ್ಲೇಶ್‌ಗೌಡ ಚಿಕ್ಕಮಗಳೂರು ಸೂರಿ ಶ್ರೀನಿವಾಸ್ ದಕ್ಷಿಣ ಕನ್ನಡ ಡಾ.ಎಂ.ಪಿ.ಶ್ರೀನಾಥ್ ಉಡುಪಿ ನೀಲಾವರ ಸುರೇಂದ್ರ ಅಡಿಗ ಶಿವಮೊಗ್ಗ ಡಿ. ಮಂಜುನಾಥ್ ದಾವಣಗೆರೆ ಬಿ. ವಾಮದೇವಪ್ಪ ಚಿತ್ರದುರ್ಗ ಕೆ.ಎಂ. ಶಿವಸ್ವಾಮಿ ಹಾವೇರಿ ಲಿಂಗಯ್ಯ ಹಿರೇಮಠ ಬೆಳಗಾವಿ ಮಂಗಲಾ ಮೆಟಗುಡ್ಡ ಧಾರವಾಡ ಲಿಂಗರಾಜ ಅಂಗಡಿ ಉತ್ತರ ಕನ್ನಡ ಬಿ.ಎನ್. ವಾಸರೆ ಗದಗ ವಿವೇಕಾನಂದಪಾಟೀಲ ಬಳ್ಳಾರಿ- ವಿಜಯನಗರ ನಿಷ್ಠಿ ರುದ್ರಪ್ಪ ವಿಜಯಪುರ ಹಾಸಿಂಪೀರ ವಾಲೀಕಾರ ಬಾಗಲಕೋಟೆ ಶಿವಾನಂದ ಶೆಲ್ಲಿಕೇರಿ ಕೊಪ್ಪಳ ಶರಣೇಗೌಡ ಪೊಲೀಸ್‌ಪಾಟೀಲ ರಾಯಚೂರು ರಂಗಣ್ಣ ಪಾಟೀಲ ಅಳ್ಳುಂಡಿ ಬೀದರ್ ಸುರೇಶ ಚನಶೆಟ್ಟಿ ಕಲಬುರ್ಗಿ ವಿಜಯಕುಮಾರ ಪಾಟೀಲ ತೇಗಲತಿಪ್ಪಿ



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries