ಕಾಸರಗೋಡು: ಕ್ಯಾಟರಿಂಗ್ ಸರ್ವೀಸ್ ಸಂಬಂಧ ಆಹಾರ ಸುರಕ್ಷೆ ಇಲಾಖೆಗೆ ಲಭಿಸುತ್ತಿರುವ ವಿವಿಧ ದುರುಗಳ ಹಿನ್ನೆಲೆಯಲ್ಲಿ ನೂತನ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.
ಆಹಾರ ಸುರಕ್ಷೆ ಕಾಯಿದೆ 2006 ರೂಲ್ಸ್ ಆಂಡ್ ರೆಗ್ಯುಲೇಷನ್ 2011 ಪ್ರಕಾರ ಕ್ಯಾಟರಿಂಗ್ ಸರ್ವೀಸ್ ಗಳಿಗೆ ಎಫ್.ಎಸ್.ಎಸ್.ಎ.ಐ. ಪರವಾನಗಿ ಕಡ್ಡಾಯವಾಗಿದೆ. ಕೆಲವು ಕ್ಯಾಟರಿಂಗ್ ಸರ್ವೀಸ್ ಸಂಸ್ಥೇಗಳು ಎಫ್.ಎಸ್.ಎಸ್.ಎ.ಐ. ನೋಂದಣಿ ಮಾತ್ರ ಪಡೆದು ಚಟುವಟಿಕೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಇದು ಕಾನೂನುಬಾಹಿರವಾದುದು. ಕ್ಯಾಟರಿಂಗ್ ಸಂಸ್ಥೆಗಳು ಪರವಾನಗಿ ಪಡೆಯಬೇಕು.
ಆಹಾರ ಪದಾರ್ಥಗಳನ್ನು ಸೂಕ್ತರೀತಿಯ ವಿಧಾನದಲ್ಲಿ ಸುರಕ್ಷಿತವಾಗಿ ಇರಿಸಬೇಕು. ಶೀತಲೀಕರಿಸಿದ ಆಹಾರವನ್ನು 5 ಡಿಗ್ರಿ ಸೆಲ್ಶಿಯಸ್ ಗಿಂತ ಕಡಿಮೆ, ಬಿಸಿ ಆಹಾರವನ್ನು 60 ಡಿಗ್ರಿ ಸೆಲ್ಶಿಯಸ್ ಗಿಂತ ಅಧಿಕ ಪ್ರಮಾಣದಲ್ಲಿ ಸುರಕ್ಷಿತವಾಗಿರಿಸಬೇಕು.
ಕ್ಯಾಟರಿಂಗ್ ಸಂಸ್ಥೆಗಳಿಂದ ವಿತರಣೆ ನಡೆಸಲಾಗುವ ಆಹಾರದ ಸ್ಯಾಂಪಲನ್ನು ಕಡ್ಡಾಯವಾಗಿ 2 ದಿನಗಳ ಅವಧಿಗೆ ಹಾಲಾಗದಂತೆ ಇರಿಸಿ, ತಪಾಸಣೆ ಅಗತ್ಯವಾದಲ್ಲಿ ಹಾಜರುಪಡಿಸಬೇಕು.
ಕ್ಯಾಟರಿಂಗ್ ಸಂಸ್ಥೆಯ ಕನಿಷ್ಠ ಒಬ್ಬ ಮೇಲ್ವಿಚಾರಕ ಎಫ್.ಎಸ್.ಎಸ್.ಎ.ಐಯ ಫೆÇೀಸ್ಟಾಕ್ ತರಬೇತಿ ಪಡೆದಿರಬೇಕು. ತರಬೇತಿ ಪಡೆದ ವ್ಯಕ್ತಿ ಸಂಸ್ಥೆಯ ಇತರ ಸಿಬ್ಬಂದಿಗೆ ತರಬೇತಿ ಒದಗಿಸಬೇಕು. ತರಬೇತಿ ಸಂಬಂದ ಸಂಶಯಗಳಿದ್ದಲ್ಲಿ ಆಹಾರ ಸುರಕ್ಷೆ ಸಹಾಯಕ ಕಮೀಷನರ್ ಗಳು, ಆಹಾರ ಸುರಕ್ಷೆ ಅಧಿಕಾರಿಗಳು ಮೊದಲಾದವರನ್ನು ಸಂಪರ್ಕಿಸಬಹುದು.
ಕ್ಯಾಟರಿಂಗ್ ಸರ್ವೀಸ್ ಗಾಗಿ ಆರ್ಡರ್ ನೀಡುವ ಗರಾಹಕರು ಸಂಸ್ಥೆಗಳು(ಕ್ಯಾಟರಿಂಗ್ ಏಜೆನ್ಸಿಗಳು, ಹೋಟೆಲ್ ಗಳು, ರೆಸ್ಟಾರೆಂಟ್) ಆಹಾರ ಸುರಕ್ಷೆ ಪರವಾನಗಿ ಹೊಂದಿ ಚಟುವಟಿಕೆ ನಡೆಸುತ್ತಿದೆ ಎಂದು ಖಚಿತಪಿಸಿಕೊಳ್ಳಬೇಕು.
ಕ್ಯಾಟರಿಂಗ್ ಸಂಸ್ಥೆಗಳ, ಹೋಟೆಲ್ ಗಳ ಸಂಬಂಧ ದೂರುಗಳು ಲಭಿಸುತ್ತಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷೆ ಇಲಾಖೆ ತಪಾಸಣೆಗಳನ್ನು ಚುರುಕುಗೊಳಿಸಿ, ಕಾನೂನು ಉಲ್ಲಂಘನೆ ಪತ್ತೆ ಮಾಡಿ ಕಠಿಣ ಕಾನೂನು ಕ್ರಮ ಕೈಘೊಳ್ಳಲಾಗುವುದು ಎಂದು ಕಮೀಷನರ್ ತಿಳಿಸಿದರು.