ಕಾಸರಗೋಡು: ಕಾಸರಗೋಡು ಚಿಮೇನಿಯ ಗ್ರಾಮಾಧಿಕಾರಿ ಕಚೇರಿ ಮೇಲೆ ವಿಜಿಲೆನ್ಸ್ ದಾಳಿ ನಡೆದಿದೆ. ಚೀಮೇನಿ ಗ್ರಾಮಾಂತರ ಕಚೇರಿಗೆ ಮಿಂಚಿನ ದಾಳಿ ನಡೆಸಲಾಯಿತು.
ದಾಳಿಯಲ್ಲಿ 10,000 ರೂ.ಗಳೊಂದಿಗೆ ಗ್ರಾಮಾಧಿಕಾರಿ ಸೇರಿದಂತೆ ಇಬ್ಬರನ್ನು ಪೋಲೀಸರು ಬಂಧಿಸಿದ್ದಾರೆ. ಗ್ರಾಮಾಧಿಕಾರಿ ಕೆ.ವಿ.ಸಂತೋಷ್ ಹಾಗೂ ಗ್ರಾಮ ಸಹಾಯಕ ಕೆ.ಸಿ.ಮಹೇಶ್ ಬಂಧಿತರು.